ಕೂಡುರಸ್ತೆ: ಪ್ರವಾದಿಗಳು ಸಾರಿರುವ ಏಕ ದೇವತ್ವದ ಸಂದೇಶ, ಬದ್ದತೆ ತೋರುವುದು, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಸಹೋದರತೆ ಬೆಳೆಸಿಕೊಳ್ಳುವುದು, ಯಾವುದೇ ತ್ಯಾಗಕ್ಕೂ ಸಿದ್ದರಾಗುವುದೇ ಬಕ್ರೀದ್ ಸಂದೇಶ ಎಂದು ಕೂಡುರಸ್ತೆ ಖತೀಬರಾದ ಬದ್ರುದ್ದೀನ್ ರಹ್ಮಾನಿ ಹೇಳಿದರು. ಬಕ್ರೀದ್ ಹಬ್ಬದ ವಿಶೇಷ ನಮಾಝಿನ ಬಳಿಕ ಸಂದೇಶ ನೀಡಿದರು.
ಮಸೀದಿಯಲ್ಲಿ ಜಮಾಅತ್ ಗೌರವಾದ್ಯಕ್ಷರಾದ ಮಾಹಿನ್ ಹಾಜಿ ಬಾಳಾಯ, ಅದ್ಯಕ್ಷರಾದ ಉಮ್ಮರ್ ಅಝ್ಹರಿ, ಉಪಾದ್ಯಕ್ಷರಾದ ಉಮ್ಮರ್ ಬಾಳಾಯ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಕಾರ್ಯದರ್ಶಿ ಇಬ್ರಾಹಿಂ ಮುಸ್ಲಿಯಾರ್, ಕೋಶಾಧಿಕಾರಿ ಹನೀಫ್ ಕೂಡುರಸ್ತೆ, ಇಕ್ಬಾಲ್ ಮುಸ್ಲಿಯಾರ್, ಪ್ರಮುಖರಾದ ಪಿ.ಕೆ ಮಹಮ್ಮದ್, ಮಜೀದ್ ಬಾಳಾಯ, ಇಸ್ಮಾಯಿಲ್ ದರ್ಬೆ, ಯಂಗ್ ಮೆನ್ಸ್ ಪ್ರಮುಖರಾದ ಶರೀಫ್ ಎಲಿಯ, ಇಬ್ರಾಹಿಂ ಅಜ್ಜಿಕಲ್ಲು, ಕರೀಂ ಅಜ್ಜಿಕಟ್ಟೆ, ಹಮೀದ್, ಅಝರುದ್ದೀನ್ ಕೂಡುರಸ್ತೆ ಹಳೆ ವಿದ್ಯಾರ್ಥಿ ಸಂಘದ ಸಾದಿಕ್, ನೌಫಲ್, ಹನೀಫ್, ಆಶಿಕ್ ಉಪಸ್ಥಿತರಿದ್ದರು.