ಕೆಯ್ಯೂರು ಕೆಪಿಎಸ್ ನ ವಿದ್ಯಾರ್ಥಿನಿಯರು ಆರ್ ಬಿ ಐ ಕ್ವಿಝ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಕೆಯ್ಯೂರು: ಸಮಗ್ರ ಶಿಕ್ಷಣ ಕರ್ನಾಟಕ  ಇದರ ಸಹಯೋಗದೊಂದಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದವರು ಸರ್ಕಾರಿ ಶಾಲಾ ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸುವ ಸಲುವಾಗಿ ಹಮ್ಮಿಕೊಂಡಂತಹ ರಸಪ್ರಶ್ನೆ ಸ್ಪರ್ಧೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನ ಹತ್ತನೇ ತರಗತಿ ವಿದ್ಯಾರ್ಥಿನಿ ಸೌಜನ್ಯ ರೈ ಹಾಗೂ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಅಸ್ಮಿತಾ ಎಸ್ ಇವರ ತಂಡ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಉಜಿರೆಯ ರುಡ್ ಸೆಟ್ ಸಭಾಂಗಣದಲ್ಲಿ  ಎಲಿಮಿನೇಷನ್ ಸುತ್ತಿನ ಬಳಿಕ  ನಡೆದ ನೇರ ಸ್ಪರ್ಧೆಯಲ್ಲಿ ಇವರು ಅತ್ಯಧಿಕ ಅಂಕ ಪಡೆದು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.  ವಿಜೇತರಿಗೆ ಜುಲೈ 1ರಂದು ಆನ್ ಲೈನ್ ಎಲಿಮಿನೇಷನ್ ಸ್ಪರ್ಧೆ ನಡೆಯಲಿದ್ದು ಅಂತಿಮ ಸುತ್ತಿಗೆ ಆಯ್ಕೆಯಾದವರಿಗೆ ಬೆಂಗಳೂರಿನಲ್ಲಿ ನಡೆಸುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ಈ ಸ್ಪರ್ಧೆ ರಾಷ್ಟ್ರಮಟ್ಟದವರೆಗೂ ನಡೆಯಲಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು ಮಾಹಿತಿ ನೀಡಿರುತ್ತಾರೆ. ಶಾಲಾ ಉಪಪ್ರಾಂಶುಪಾಲ ಕೆ.ಎಸ್ ವಿನೋದ್ ಕುಮಾರ್ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಶಾಲಾ ಶಿಕ್ಷಕ ವೃಂದ ತರಬೇತಿ ನೀಡಿದರು.

LEAVE A REPLY

Please enter your comment!
Please enter your name here