ಬಡಗನ್ನೂರು ಶಾಲಾ ಮಂತ್ರಿ ಮಂಡಲ ರಚನೆ

0

ಪುತ್ತೂರು: 2023-24ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲ ನಡೆಸಲಾಯಿತು. ಮುಂಖ್ಯಮಂತ್ರಿ ಸ್ಥಾನಕ್ಕಾಗಿ ಆಯಿಷತ್ತುಲ್ಲ್ ಅಝ್ಮಿಯಾ ಬಹುಮತದೊಂದಿಗೆ ಮುಖ್ಯ ಮಂತ್ರಿಯಾಗಿ ಆಯ್ಕೆಗೊಂಡರು. ಸಭಾಪತಿಯಾಗಿ ಯಶಸ್ವಿನಿ ಹಾಗು ವಿರೋಧ ಪಕ್ಷದ ನಾಯಕಿಯಾಗಿ ಅನನ್ಯ ಆಯ್ಕೆಗೊಂಡರು. ಉಪಮುಖ್ಯ ಮಂತ್ರಿ-ಯಶಸ್ವಿನಿ, ಗೃಹ ಮಂತ್ರಿ- ದೀಕ್ಷಿತ್, ನೀರಾವರಿ ಮಂತ್ರಿ -ಮನ್ವಿತ್, ಉಪ ನೀರಾವರಿ ಮಂತ್ರಿ-ಶ್ರವಣ್ ಆರೋಗ್ಯಮಂತ್ರಿ-ಅಫೀದಾ, ಉಪ ಆರೋಗ್ಯ ಮಂತ್ರಿ-ವಿಸ್ಮಿತಾ, ಶಿಕ್ಷಣ ಮಂತ್ರಿ- ನಿಶ್ಮಿತಾ, ಉಪ ಶಿಕ್ಷಣ-ದೇವಿಕಾ, ಕ್ರೀಡಾ ಮಂತ್ರಿ-ಫಯಿಮಾ, ಉಪ ಕ್ರೀಡಾ ಮಂತ್ರಿ- ಶಫೀರ್, ಸಾಂಸ್ಕೃತಿಕ ಮಂತ್ರಿ-ವಿನ್ಯಶ್ರೀ, ಉಪ ಸಾಂಸ್ಕೃತಿಕ- ಗಾಯತ್ರಿ, ಆಹಾರ ಮಂತ್ರಿ-ರಾಯಿಫಾ, ಉಪ ಆಹಾರ-ಶಫಾ, ಕೃಷಿ ಮಂತ್ರಿ- ಕಾರ್ತಿಕ್,ಹಾಗು ಉಪ ಕೃಷಿ ಮಂತ್ರಿಯಾಗಿ ಆಶಿಕ್ ಆಯ್ಕೆಯಾದರು. ಮುಖ್ಯ ಶಿಕ್ಷಕಿ ಹರಿಣಾಕ್ಷಿ ಅವರ ಮಾರ್ಗದರ್ಶನದಲ್ಲಿ ಜಿ.ಪಿ.ಟಿ ಶಿಕ್ಷಕ ಜನಾರ್ಧನ ಇವರು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜಿ.ಪಿ.ಟಿ ಶಿಕ್ಷಕಿಯರಾದ ವಿಜಯಲಕ್ಷ್ಮಿ ಹಾಗು ರಮ್ಯ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.

LEAVE A REPLY

Please enter your comment!
Please enter your name here