ಐ.ಆರ್.ಸಿ.ಎಂ.ಡಿ ಅಬಾಕಸ್ ಶಿಕ್ಷಣ ಸಂಸ್ಥೆಯಲ್ಲಿ ಅಂತರ್ರಾಷ್ಟ್ರೀಯ ಅಬಾಕಸ್ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ

0

ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ಐ.ಆರ್.ಸಿ.ಎಂ.ಡಿ ನೀಡುತ್ತಿದೆ-ಮನೋಹರ್ ಪ್ರಸಾದ್

ಪುತ್ತೂರು:13 ವರ್ಷಗಳ ಹಿಂದೆ ತನ್ನ ಕಿರಿಯ ವಯಸ್ಸಿನಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ 5000ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದ ಈ ದಂಪತಿಯ ಕೀರ್ತಿ ಮೆಚ್ಚತಕ್ಕದ್ದು. ಮಾತ್ರವಲ್ಲ ಈ ಸಂಸ್ಥೆಯು ಇನ್ನೂ ಎತ್ತರಕ್ಕೆ ಬೆಳೆದು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡಲಿ ಎಂದು ಹಿರಿಯ ಪತ್ರಕರ್ತರಾದ ಮನೋಹರ್ ಪ್ರಸಾದ್ ರವರು ಹೇಳಿದರು.
ಜೂ.29ರಂದು ಬೆಳಗ್ಗೆ ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ವತಿಯಿಂದ ನಡೆದ ಅಂತರ್ರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಐ.ಆರ್.ಸಿ.ಎಂ.ಡಿ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದೆ ಮಾತ್ರವಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಬದುಕನ್ನು ರೂಪಿಸುವತ್ತ ಹೆಜ್ಜೆಯನ್ನಿಟ್ಟಿರುವುದು ಶ್ಲಾಘನೀಯ ಎಂದರಲ್ಲದೆ ತನ್ನ ಪತ್ರಿಕಾ ವೃತ್ತಿ ಜೀವನದ ಬಗ್ಗೆ ಸಭಿಕರಿಗೆ ತಿಳಿಸಿದರು. ಅಲ್ಲದೇ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿ 100 ಪುಸ್ತಕವನ್ನು ಐ.ಆರ್.ಸಿ.ಎಂ.ಡಿ ಎಜ್ಯುಕೇಶನ್ ಸೆಂಟರ್ ಗೆ ದೇಣಿಗೆ ನೀಡುವುದಾಗಿ ತಿಳಿಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ ದ.ಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಮಾತನಾಡಿ, ಉಚಿತವಾಗಿ ವಿದ್ಯಾಭ್ಯಾಸವನ್ನು ನೀಡುವುದೆಂದರೆ ಅದು ಸುಲಭದ ಮಾತು ಅಲ್ಲ. ಸರಕಾರಿ ಶಾಲೆಗೆ ಉಚಿತ ಅಬಾಕಸ್ ತರಬೇತಿ ನೀಡುವುದನ್ನು ಶ್ಲಾಘಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಕಹಳೆ ನ್ಯೂಸ್ ಮುಖ್ಯಸ್ಥ ಶ್ಯಾಮ ಸುದರ್ಶನ್ ಭಟ್ ಹೊಸಮೂಲೆರವರು ಮಾತನಾಡಿ, ಒಂದು ಮಗುವಿಗೆ ಏನನ್ನು ಕಲಿಸಬೇಕು, ಹೇಗೆ ಕಲಿಸಬೇಕು ಸಾಧನೆಯ ಹಾದಿಯನ್ನು ಸುಲಭವಾಗಿ ತಲುಪಲು ಶ್ರಮಿಸುತ್ತಿರುವ ಐ.ಆರ್.ಸಿ.ಎಂ.ಡಿ ಎಜ್ಯುಕೇಶನ್ ಸೆಂಟರ್ ನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಬೆಳ್ತಂಗಡಿಯಲ್ಲೂ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ತನ್ನ ಸಹ ಸಂಸ್ಥೆಯನ್ನು ಆರಂಭಿಸಲು ತನ್ನ ಸಹಕಾರವಿದೆ ಎಂದು ತಿಳಿಸಿದರು.
ಮತ್ತೋರ್ವ ಅತಿಥಿ ಸಂಜೀವಿನಿ ಕ್ಲಿನಿಕ್‌ನ ಡಾ.ರವಿನಾರಾಯಣ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸುಳ್ಯ ಮತ್ತು ಪುತ್ತೂರಿನ ವಿದ್ಯಾರ್ಥಿಗಳು, ಪೋಷಕರು ಮತ್ತು ಇತರೆ ಗಣ್ಯರು ಪಾಲ್ಗೊಂಡಿದ್ದರು. ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಪ್ರಫುಲ್ಲ ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ತರಬೇತುದಾರರಾಗಿರುವ ಕು.ಅಕ್ಷತಾ ಸ್ವಾಗತಿಸಿ, ಸಂಸ್ಥೆಯ ಮತ್ತೋರ್ವ ತರಬೇತುದಾರರಾಗಿರುವ ಕು.ಹರ್ಷಿತಾ ವಂದಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಬಾಲಕೃಷ್ಣ ನಿರೂಪಿಸಿದರು.

ಐ.ಆರ್.ಸಿ.ಎಂ.ಡಿ ಸಂಸ್ಥೆಗೆ ಚಾಂಪಿಯನ್ ಪ್ರಶಸ್ತಿ

TRS ಸಂಸ್ಥೆ ನಡೆಸಿದ ಅಂತಾರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ 32 ವಿದ್ಯಾರ್ಥಿಗಳು ಭಾಗವಹಿಸಿದ್ದು, ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಸಂಸ್ಥೆಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ ತಂದಿರುತ್ತಾರೆ. ಚಾಂಪಿಯನ್ 2023 ಪ್ರಶಸ್ತಿಯನ್ನು ಮಾ.ಕೃಪಾಹರಿ ಎಂ ರೈ (ವಿದ್ಯಾರಶ್ಮಿ ವಿದ್ಯಾಲಯ ಸವಣೂರು), ಮಾ.ಚಿರಾಗ್ ಎಂ.ಎಲ್ (ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ), ಮಾ.ಜೆಸ್ವಿತ್ ಕೆ. ಸಿ (ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯ) ಕ್ರಮವಾಗಿ ಪಡೆದರು. ಟಾಪರ್ಸ್ 2023 ಪ್ರಶಸ್ತಿಯನ್ನು ಕು.ಪ್ರಣತಿ ಬಂಗಾರಕೋಡಿ (ವಿವೇಕಾನಂದ ಕ. ಮಾ ಶಾಲೆ ಪುತ್ತೂರು), ಕು.ಪೃಥ್ವಿ ಎನ್(ಮಾಯಿದೆ ದೇವುಸ್ ಕ. ಮಾ ಶಾಲೆ ಪುತ್ತೂರು), ಕು.ಯಶ್ಮಿತಾ ರಾವ್ (ಕೆಪಿಎಸ್ ಗಾಂಧಿನಗರ ಸುಳ್ಯ ), ವಿನ್ನರ್ಸ್ 2023 ಪ್ರಶಸ್ತಿಯನ್ನು ಕು.ತನಯ ಕೆ.(ಸಂತ ವಿಕ್ಟರನ ಆ.ಮಾ ಶಾಲೆ ಪುತ್ತೂರು ), ಕು.ತಪಸ್ಯ (ಅಂಬಿಕಾ ವಿದ್ಯಾಲಯ ಪುತ್ತೂರು), ಮಾ.ಅರ್ಜುನ್ ನವೀನ್ (ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ), ಕು.ಭಾನ್ವಿ(ಲಿಟ್ಲ್ ಫ್ಲವರ್ ಕ. ಮಾ ಶಾಲೆ ಪುತ್ತೂರು), ರನ್ನರ್ಸ್ 2023 ಪ್ರಶಸ್ತಿಯನ್ನು ಕು.ಆಶ್ವಿಕೃಷ್ಣ (ಲಿಟ್ಲ್ ಫ್ಲವರ್ ಕ.ಮಾ ಶಾಲೆ ಪುತ್ತೂರು), ಮಾ.ಆಹನ್ ಜೈನ್ (ಸಂತ ವಿಕ್ಟರನ ಆ.ಮಾ ಶಾಲೆ ಪುತ್ತೂರು ) ಕು.ವೃತಿಕಾ (ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ), ಮಾ.ಶ್ಲೋಕ್ ಎಸ್ ನಾಯ್ಕ್ ( ಜೈ ಮಾತಾ ಸ್ಕೂಲ್ ಕಾಸರಗೋಡು) ಕ್ರಮವಾಗಿ ಪಡೆದರು. ಬೆಸ್ಟ್ ಪರ್ಫಾರ್ಮರ್ ಆಗಿ ಮಾ.ಆಶಿಶ್ ಗೌಡ (ವಿವೇಕಾನಂದ ಆ.ಮಾ ಶಾಲೆ ಪುತ್ತೂರು), ಮಾ.ಹವೀಶ್ ಬಿ.ಕೆ (ಸಂತ ರೀಟಾ ಆ. ಮಾ ಶಾಲೆ ವಿಟ್ಲ ), ಕು.ಇಚ್ಚಿಕಾ ಜೈನ್ (ಸಂತ ವಿಕ್ಟರನ ಆ. ಮಾ ಶಾಲೆ ಪುತ್ತೂರು ), ಮಾ.ಸಾತ್ವಿಕ್ ಕೆ.ಸಿ (ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯ) ಕ್ರಮವಾಗಿ ಪಡೆದರು.

LEAVE A REPLY

Please enter your comment!
Please enter your name here