ಪುತ್ತೂರು : ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ,ಖರೀದಿ ಸಂಸ್ಥೆ ತೆಂಕಿಲ ಬೈಪಾಸ್ ಬಳಿಯ ಭಾರತ್ ಟ್ರೂ ವ್ಯಾಲ್ಯೂನಲ್ಲಿ ಉಪಯೋಗಿಸಿದ ಕಾರುಗಳ ಮಾರಾಟ ಮೇಳ ಮೂರು ದಿನಗಳ ಕಾಲ ನಡೆಯಲಿದ್ದು ಜೂ. 29ರಂದು ಆರಂಭಗೊಂಡಿದೆ.

ಯೋಗ್ಯ ರೀತಿಯ , ಸುಸ್ಥಿತಿಯಲ್ಲಿರುವಂತಹ ಉಪಯೋಗಿಸಿದ ಮಾರುತಿ ಕಾರುಗಳ ಬೃಹತ್ ಮಾರಾಟ ಮೇಳ ಪ್ರಾರಂಭಗೊಂಡಿದ್ದು ,ಮೊದಲ ದಿನವೇ 2 ವ್ಯಾಗನರ್ ಹಾಗೂ 1 ಅಲ್ಟೋ ಕಾರು ಮಾರಾಟವಾಗುವ ಮೂಲಕ ಮೇಳಕ್ಕೆ ಪ್ರೋತ್ಸಾಹ ದೊರೆತಿದೆ.


ಮೇಳದಲ್ಲಿ ಮಾರುತಿಯ ಹಲವು ಮಾದರಿಯ ಸುಮಾರು 17 ಕಾರುಗಳ ಪ್ರದರ್ಶನವಿದ್ದು , ಹಲವು ಭಾಗಗಳಿಂದ ಕಾರು ಪ್ರಿಯರು ಕುಟುಂಬ ಸಮೇತರಾಗಿ ಆಗಮಿಸಿ ಕಾರು ಖರೀದಿಗೆ ಮುಂದಾದರು.
ಮೂರು ದಿನಗಳವರೆಗೆ ನಡೆಯಲಿರುವ ಈ ಬೃಹತ್ ಕಾರು ಮಾರಾಟ ಮೇಳದಲ್ಲಿ ಗ್ರಾಹಕರು ಕೊಂಡುಕೊಳ್ಳುವ ಕಾರುಗಳಿಗೆ ಒಂದು ವರುಷದ ವ್ಯಾರಂಟಿ , ಉಚಿತವಾಗಿ ಮೂರು ಸರ್ವಿಸ್‌ಗಳೊಂದಿಗೆ ಸರ್ಟಿಫೈಡ್ ವೆಹಿಕಲ್ ಸೇವೆಯೂ ಲಭ್ಯ.
ಇಷ್ಟೇಯಲ್ಲದೇ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವ್ಯವಸ್ಥೆಯೂ ಇರಲಿದ್ದು ,ಆಕರ್ಷಕ ಬೆಲೆಯಲ್ಲಿ ತಾವೆಂದೂ ಊಹಿಸಲಸಾಧ್ಯವಾದ ರೀತಿ ಭಾರತ್ ಟ್ರೂ ವ್ಯಾಲ್ಯೂ ಕಾರುಪ್ರಿಯರಿಗೆ ಅವಕಾಶ ಒದಗಿಸಿಕೊಟ್ಟಿದ್ದು , ಆಸಕ್ತರು ಪ್ರಯೋಜನ ಪಡೆಯುವಂತೆ ಸಂಸ್ಥೆಯ ಪ್ರತಿನಿಧಿ ವಿವೇಕ್ ವಿನಂತಿಸಿದ್ದಾರೆ.
ನಾಳೆ ಮೇಳ ಕೊನೆ
ಮೊದಲ ದಿನವೇ ಅತ್ಯುತ್ತಮ ಬೆಂಬಲ ಸಿಕ್ಕಿದೆ.
ಹಲವು ಮಾದರಿಯ ಸುಮಾರು 17 ಕಾರುಗಳಿದ್ದು , ಮೊದಲ ದಿನವೇ 3 ಕಾರುಗಳು ಮಾರಾಟವಾಗಿವೆ. ಮಾಹಿತಿ 800 ಹಾಗೂ ಅಲ್ಟೋ ಗೆ ಹೆಚ್ಚಿನ ಬೇಡಿಕೆ ಬಂದಿದ್ದು , ಉಡುಪಿ ಸಹಿತ ವಿವಿಧ ಕಡೆಗಳಿಂದ ಅತೀ ಹೆಚ್ಚು ಫೋನ್ ಕರೆಗಳು ಬಂದಿದೆ.
-ವಿವೇಕ್, ಎಕ್ಸಿಕ್ಯೂಟಿವ್.
: ವಿವರಗಳಿಗಾಗಿ :9449009130, 9449001230