ವಿವೇಕಾನಂದ ಕಾಲೇಜಿನ ಕಛೇರಿ ನಿವೃತ್ತ ಅಧೀಕ್ಷಕ ಸೀತಾರಾಮ ಶೆಣೈ ನಿಧನ

0

ಪುತ್ತೂರು.; ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಕಚೇರಿಯ ನಿವೃತ್ತ ಅಧೀಕ್ಷಕರಾದ ಸೀತಾರಾಮ ಶೆಣೈ ಜೂ.30ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. 1965 ರಲ್ಲಿ ವಿವೇಕಾನಂದ ಕಾಲೇಜಿನ ಅಧ್ಯಾಪಕೇತರರ ಸಿಬ್ಬಂದಿಯಾಗಿ ಸೇರ್ಪಡೆಗೊಂಡಿದ್ದ ಇವರು ನಂತರ 1967ರಲ್ಲಿ ಕಛೇರಿಯ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಸುಮಾರು 34ವರ್ಷಗಳ ಕಾಲ ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ದೀರ್ಘ ಸೇವೆ ಸಲ್ಲಿಸಿರುವ ಇವರು 2001 ರಲ್ಲಿ ನಿವೃತ್ತಿಗೊಂಡಿದ್ದರು. ಕಾಲೇಜಿನಲ್ಲಿ ಅಧ್ಯಾಪಕೇತರ ನೌಕರರ ಸಂಘವನ್ನು ಇವರ ನೇತೃತ್ವದಲ್ಲಿ ಆರಂಭಿಸಲಾಗಿತ್ತು. ಸೀತಾರಾಮ ಶೆಣೈ ಅವರ ನಿಧನಕ್ಕೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಬಂಧುಗಳು, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here