ಆಲಂಕಾರು: ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ನಿಂಗರಾಜು ಕೆ.ಪಿ ಸವಣೂರು ಶಾಲೆಗೆ ವರ್ಗಾವಣೆ

0

ಆಲಂಕಾರು: ಆಲಂಕಾರು ದ.ಕ ಜಿ.ಪ.ಹಿ.ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ನಿಂಗರಾಜು ಕೆ.ಪಿ ಯವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಸವಣೂರಿಗೆ ವರ್ಗಾವಣೆಗೊಂಡಿದ್ದಾರೆ. ಇವರು ಮೇ.23 ,2013 ರಿಂದ ಆಲಂಕಾರು ದ.ಕ ಜಿ.ಪ.ಹಿ ಶಾಲೆಗೆ ಮುಖ್ಯ ಶಿಕ್ಷಕರಾಗಿ ಕರ್ತವ್ಯಕೆ ಹಾಜರಾಗುವ ಸಂಧರ್ಭದಲ್ಲಿ ಶಾಲೆಯ ಮಕ್ಕಳ ಸಂಖ್ಯೆ 201ಇದ್ದು ನಂತರದ ವರ್ಷದಲ್ಲಿ170 ತದನಂತರ 168 ಹೀಗೆ ಮಕ್ಕಳ ದಾಖಲಾತಿ ಕಡಿಮೆಯಾಗುವುದನ್ನು ಮನಗಂಡು ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆಯ ಮೂಲಭೂತ ಸೌಲಭ್ಯಗಳು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಎಲ್ಲಾರ ಸಲಹೆ ಸಹಕಾರಗಳನ್ನು ಪಡೆದುಕೊಂಡು ಶಾಲೆಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಯತ್ನ ನಡೆಯಿತು.

ಸುಸಜ್ಜಿತ ಹೆಣ್ಣು ಮಕ್ಕಳ ಶೌಚಾಲಯ ಮತ್ತು ನ್ಯಾಪ್ಕಿನ್ ಬರ್ನರ್ ಅಳವಡಿಸುವುದರ ಮೂಲಕ ಹೆಣ್ಣು ಮಕ್ಕಳ ಹಾಜರಾತಿಯನ್ನು ಮತ್ತು ದಾಖಲಾತಿಯನ್ನು ಹೆಚ್ಚಿಸಿದರು. ಎಲ್ಲಾ ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ, ಆಕರ್ಷಕ ಸುಣ್ಣಬಣ್ಣ, ಗೋಡೆಗಳಿಗೆ ವರ್ಲಿ ಚಿತ್ತಾರದೊಂದಿಗೆ ಶೃಂಗಾರ, ಶಾಲಾ ಮುಂಭಾಗದಲ್ಲಿ ಸಪ್ತವರ್ಣಗಳ ಧ್ವಜವನ್ನು ಅಳವಡಿಸಿ ಹೂವಿನ ಕುಂಡಗಳನ್ನ ಜೋಡಿಸಿ ಶಾಲಾ ಹೂದೋಟವನ್ನು ಮಾಡುವುದರೊಂದಿಗೆ ಶಾಲೆಯ ಅಂದಕ್ಕೆ ಮತ್ತಷ್ಟು ಮೆರಗು ನೀಡುವಂತೆ ಮಾಡಿದರು. ಮೈಕ್ ಸೆಟ್, ಬ್ಯಾಂಡ್ಸೆಟ್, ಮಕ್ಕಳಿಗೆ ಟೈ, ಬೆಲ್ಟ್ ಐಡಿ ಜೊತೆಗೆ ಶಿಕ್ಷಕರಿಗೂ ಸಮವಸ್ತ್ರ ಮಾಡಿಕೊಳ್ಳುವುದರ ಜೊತೆಗೆ ಶಾಲೆಯಲ್ಲಿ ಅಭೂತಪೂರ್ವ ಬದಲಾವಣೆ , ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿಎಸ್ ಅವರ ಕನಸಿನ ಕೂಸಾದ,” ವಿಷನ್ ಪುತ್ತೂರು”ಎಂಬ ಯೋಜನೆಯಡಿಯಲ್ಲಿ ನಮ್ಮ ಶಾಲೆ ಆಯ್ಕೆ, ಎಲ್ ಕೆ ಜಿ /ಯುಕೆಜಿ ಆರಂಭಿಸುವುದರೊಂದಿಗೆ ದಾಖಲಾತಿ ಹೆಚ್ಚಳಗೊಂಡು
ಇದೀಗ ದ.ಕ ಜಿ.ಪ ಹಿ.ಪ್ರಾಶಾಲೆಯಲ್ಲಿ 417 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2019-20 ನೇ ಸಾಲಿನಲ್ಲಿ ಶಾಲಾ ಶತಮಾನೋತ್ಸವವನ್ನು ಆಚರಣೆ, ಶಾಲೆಗೆ ಬೇಕಾಗುವ ಹೊಸ ಕಟ್ಟಡ, ರಂಗಮಂದಿರ ಆವರಣ ಗೋಡೆ, ಆಟದ ಮೈದಾನ ವಿಸ್ತರಣೆ, ಶುದ್ಧಕುಡಿಯುವ ನೀರಿನ ಘಟಕ, ಕೈತೊಳೆಯುವ ಘಟಕ, ಜಲ ಮರುಪೂರ್ಣ ಯೋಜನೆ, ಇಂಗು ಗುಂಡಿ ನಿರ್ಮಾಣ ದಾನಿಗಳಿಂದ ಲ್ಯಾಂಪ್ ಟಾಪ್, ಪ್ರಿಂಟರ್, ಕಂಪ್ಯೂಟರ್, ಸ್ಟೇಜ್ ಸ್ಕ್ರೀನ್, ಫೋಕಸ್ ಲೈಟ್, ಪ್ರತೀ ತರಗತಿಗಳಿಗೆ ಕೋಣಗಳಿಗೆ ಸೌಂಡ್ ಸಿಸ್ಟಮ್ ಪ್ರೊಜೆಕ್ಟರ್, ಸ್ಮಾರ್ಟ್ ಕ್ಲಾಸ್ , ಟಿವಿಗಳ ಅಳವಡಿಕೆ ಮಕ್ಕಳ ಸುರಕ್ಷತೆ ಮತ್ತು ಶಾಲಾ ಆಸ್ತಿ ಸಂರಕ್ಷಣೆಗಾಗಿ ಸಿಸಿಟಿವಿ ಅಳವಡಿಕೆ ಇವುಗಳನ್ನ ಮಾಡಿಕೊಂಡು ಅಕ್ಷರ ದಾಸೋಹದ ಯೋಜನೆಯನ್ನು ಸುಸೂತ್ರವಾಗಿ ಏಕಕಾಲಕ್ಕೆ ಎಲ್ಲ ಮಕ್ಕಳಿಗೆ ಏಕಕಾಲದಲ್ಲಿ ಗುಣಪಡಿಸುವ ಕೌಂಟರ್ ಪಾತ್ರಗಳು ಊಟವನ್ನ ಕೊಂಡು ಹೋಗಲು ಟ್ರ್ಯಾಲಿ ಹೀಗೆ ಹಲವಾರು ಯೋಜನೆಗಳನ್ನ ವ್ಯವಸ್ಥೆಗಳನ್ನು ಮಾಡಿಕೊಂಡು ಶಾಲೆಯಿಂದ 2023 ನೇ ಸಾಲಿನಲ್ಲಿ ಮೇಲ್ದರ್ಜೆಗೆ ಏರಿದೆ. ಇದೀಗ ಕೆ.ಪಿ‌ ನಿಂಗರಾಜು ಅವರು ಮುಖ್ಯ ಶಿಕ್ಷಕರು ಹೆಚ್ಚುವರಿಗೊಂಡು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿಗೆ ವರ್ಗಾವಣೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here