ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ಸಿಇಟಿ, ನೀಟ್ ವಿಶೇಷ ತರಗತಿಗಳ ಉದ್ಘಾಟನೆ, ಉಪನ್ಯಾಸ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ-ನೀಟ್ ತರಗತಿಗಳ ಉದ್ಘಾಟನಾ ಸಮಾರಂಭವು ನಡೆಯಿತು.
ತರಬೇತುದಾರ ಶೃತಕೀರ್ತಿ ಜೈನ್‌ರವರು ತರಗತಿ ಉದ್ಘಾಟಿಸಿದರು. ಬಳಿಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಕೆರಿಯರ್ ಪ್ಲಾನಿಂಗ್ ಎಂಬ ವಿಷಯವಾಗಿ ಉಪನ್ಯಾಸವನ್ನು ನೀಡಿ, ವಿದ್ಯಾರ್ಥಿಗಳು ಅವಕಾಶಗಳನ್ನ ಹುಡುಕಬೇಕು ಮತ್ತು ಸೃಷ್ಟಿಸಿಕೊಳ್ಳಬೇಕು. ತಮಗೆ ಪ್ರಿಯವಾದಂತಹ ಆಟ, ನಿದ್ದೆ, ಮೊಬೈಲ್, ಟಿವಿ ಇವೆಲ್ಲವನ್ನ ಕೆಲವು ಸಮಯಗಳವರೆಗೆ ತ್ಯಜಿಸಿ, ತಪಸ್ಸಿನ ರೀತಿಯಲ್ಲಿ ಸಿಇಟಿ, ನೀಟ್, ಜೆಇಇ ಅಥವಾ ಯಾವುದೇ ಪರೀಕ್ಷೆಗೆ ತಯಾರಾಗಬೇಕು. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಇರುವಂತೆ ಅವಕಾಶವೂ ಇದೆ. ನಮ್ಮ ತರಬೇತಿಯಲ್ಲಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ರೀತಿಯಲ್ಲಿ ತಯಾರಾಗುವುದನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತದೆ. ಮುಖ್ಯವಾಗಿ ಪ್ರಶ್ನೆಗಳಿಗೆ ಸುಲಭ ರೀತಿಯಲ್ಲಿ ಕಡಿಮೆ ಅವಧಿಯಲ್ಲಿ ಉತ್ತರಿಸುವುದು ಹೇಗೆ ಎಂದು ಕೂಡ ನಾವು ಹೇಳಿಕೊಡುತ್ತೇವೆ. ಅದು ನಮ್ಮ ಮೂಲ ಉದ್ದೇಶವೂ ಆಗಿದೆ. ಇದರ ಸದುಪಯೋಗವನ್ನ ನೀವೆಲ್ಲರೂ ಮಾಡಬೇಕು ಎಂದು ಹೇಳಿದರು.


ಕಾಲೇಜಿನ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್ ಅಧ್ಯಕ್ಷೀಯ ನುಡಿಗಳನ್ನು ಆಡಿದರು. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ., ವಿಜ್ಞಾನ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.


ಸಿಇಟಿ ನೀಟ್ ತರಗತಿಗಳ ಸಂಯೋಜಕರಾದ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸ್ವಾತಿ ವಂದಿಸಿದರು.

LEAVE A REPLY

Please enter your comment!
Please enter your name here