ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸಿಎ ದಿನಾಚರಣೆ

0

ಪುತ್ತೂರು: ವಿದ್ಯಾರ್ಥಿಗಳ ಜೀವನದಲ್ಲಿ ನಿಶ್ಚಿತವಾದ ಗುರಿಯಿದ್ದರೆ ಮಾತ್ರ ಯಶಸ್ಸು ಸಾಧ್ಯ. ಗುರಿಯನ್ನು ಸಾಧಿಸುವ ಛಲ ಪ್ರತಿಯೊಬ್ಬರಲ್ಲೂ ಇರಬೇಕು. ನಿರಂತರ ಪ್ರಯತ್ನದಿಂದ ಗೆಲುವು ಸಾಧ್ಯ ಎಂದು ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಎಂ ಜಗನ್ನಾಥ ಕಾಮತ್ ಅಂಡ್ ಕೋ ಇದರ ಮ್ಯಾನೇಜಿಂಗ್ ಪಾರ್ಟ್ನರ್ ಆಗಿರುವ ಸಿಎ ಎಂ ಜಗನ್ನಾಥ ಕಾಮತ್ ಹೇಳಿದರು.

ಅವರು ಜುಲೈ.1ರಂದು ಸಂತ ಫಿಲೋಮಿನ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘದ ಆಶ್ರಯದಲ್ಲಿ ನಡೆದ ವಾಣಿಜ್ಯ ಸಂಘದ ಉದ್ಘಾಟನೆ ಮತ್ತು ರಾಷ್ಟ್ರೀಯ ಸಿಎ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಿಎ ಮಾಡಲು ವಿದ್ಯಾರ್ಥಿಗಳಿಗೆ ಲೆಕ್ಕಪತ್ರ ನಿರ್ವಹಣೆ, ಹಣಕಾಸು, ಸಾಮಾನ್ಯ ಗಣಿತ ಇನ್ನಿತರ ಕ್ಷೇತ್ರದಲ್ಲಿ ಪದವಿ ಅಗತ್ಯವಿರುತ್ತದೆ. ಸಿಎ ಮಾಡಲು ಬೇಕಾದ ಅರ್ಹತೆ ಪರಿಶ್ರಮದ ಬಗ್ಗೆ ತಿಳಿಸಿದರು.


ಮುಖ್ಯ ಅತಿಥಿಗಳಾದ ಫೈನಾನ್ಸಿಯಲ್ ಎನಾಲಿಸ್ಟ್ ಅಟ್ ಅಮೆಜಾನ್ ನ ಸಿಎ ಕೆ ಮಹಮ್ಮದ್ ಫೈರೋಜ್ ಮಾತನಾಡಿ ವೈಫಲ್ಯವು ಯಶಸ್ಸಿನ ಮೆಟ್ಟಿಲು ಕಷ್ಟಪಟ್ಟು. ಓದಿ ವಿಷಯವನ್ನು ಸರಿಯಾಗಿ ಗ್ರಹಿಸಿಕೊಂಡಾಗ ವಿದ್ಯಾರ್ಥಿಗಳು ಸಿಎ ಆಗಲು ಸಾಧ್ಯವಾಗುತ್ತದೆ. ನಿರಂತರ ಪರಿಶ್ರಮ ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ವಾಣಿಜ್ಯಶಾಸ್ತವನ್ನು ಅಧ್ಯಯನ ಮಾಡುವುದರಿಂದ ಹಲವಾರು ಅವಕಾಶಗಳು ಸಿಗುತ್ತದೆ. ಬ್ಯಾಂಕಿಂಗ್ ಕ್ಷೇತ್ರ, ಚಾರ್ಟೆಡ್ ಅಕೌಂಟೆಂಟ್ ನಂತಹ ಬೇರೆ ಬೇರೆ ಕ್ಷೇತ್ರಗಳು ವಿದ್ಯಾರ್ಥಿಗಳ ಮುಂದೆ ತೆರೆದಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.


ವೇದಿಕೆಯಲ್ಲಿ ವಾಣಿಜ್ಯ ಸಂಘದ ನಿರ್ದೇಶಕರು ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ ವಿದ್ಯಾರ್ಥಿಗಳಾದ ನಿಧಾ ಅತಿಥಿಗಳನ್ನು ಸ್ವಾಗತಿಸಿ ಪ್ರತೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ಆಸ್ತಿಕ ವಂದಿಸಿ ನಿಶ್ಚಿತ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here