ಪುತ್ತೂರು: 2023-24ನೇ ಸಾಲಿನ ಲಯನ್ಸ್ ಜಿಲ್ಲೆ 317ಡಿ, ಪ್ರಾಂತ್ಯ 4ರ ಪ್ರಾಂತೀಯ ಅಧ್ಯಕ್ಷರಾಗಿ ಲ್ಯಾನ್ಸಿ ಮಸ್ಕರೇನ್ಹಸ್‌ರವರನ್ನು ಜಿಲ್ಲಾ ರಾಜ್ಯಪಾಲರಾದ ಡಾ.ಮೆಲ್ವಿನ್ ಡಿ’ಸೋಜರವರು ನೇಮಕ ಮಾಡಿರುತ್ತಾರೆ.

ಸಾಮೆತ್ತಡ್ಕ ದಿ.ಲೂಯಿಸ್ ಮಸ್ಕರೇನ್ಹಸ್ ಹಾಗೂ ಸ್ಟೆಲ್ಲ ಮಸ್ಕರೇನ್ಹಸ್‌ರವರ ಪುತ್ರರಾಗಿ ಜನಿಸಿದ ಲ್ಯಾನ್ಸಿ ಮಸ್ಕರೇನ್ಹಸ್‌ರವರು ಲ್ಯಾನ್ಸಿ ಮಸ್ಕರೇನ್ಹಸ್‌ರವರು ಲಯನ್ಸ್ ಕ್ಲಬ್ ಪುತ್ತೂರ‍್ದ ಮುತ್ತು ಇದರ ಸ್ಥಾಪಕ ಅಧ್ಯಕ್ಷರು ಹಾಗೂ ವಲಯ ಒಂದರ ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಾಮೆತ್ತಡ್ಕ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಪೂರೈಸಿದ್ದರು. ಪುತ್ತೂರು ಪುರಸಭೆಯ ಎರಡು ಬಾರಿ ಚುನಾಯಿತ ಸದಸ್ಯ(10 ವರ್ಷ)ರಾಗಿದ್ದು, ಒಂದು ಅವಧಿಗೆ ಮಾಜಿ ಉಪಾಧ್ಯಕ್ಷರಾಗಿ, 9 ವರ್ಷ ಪುತ್ತೂರು ನಗರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾಗಿ, ಐದು ವರ್ಷ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷರಾಗಿ, ಮಾಯಿದೆ ದೇವುಸ್ ಚರ್ಚ್‌ನ ಆರ್ಥಿಕ ಸಮಿತಿಯ ಸದಸ್ಯನಾಗಿ 12 ವರ್ಷ ಸೇವೆ, 21 ಸಂಘಟನೆಗಳ ಸಂಯೋಜಕರಾಗಿ, ಹತ್ತು ವರ್ಷ ಮಾಯಿದೆ ದೇವುಸ್ ಚರ್ಚ್‌ನ ಸಾಮೆತ್ತಡ್ಕ ವಾಳೆಯ ಗುರಿಕಾರರಾಗಿ, ಗ್ಲೋರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ, ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಡಳಿತ ಸಮಿತಿ ಸದಸ್ಯರಾಗಿ, ಸಂತ ಫಿಲೋಮಿನಾ ಪ್ರೌಢಶಾಲೆಯ ರಕ್ಷಕ-ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು.
ಪ್ರಸ್ತುತ ಪುತ್ತೂರು ವಲಯಕ್ಕೆ ಸಂಬಂಧಿಸಿದ 12 ಚರ್ಚ್‌ಗಳ ಕಥೋಲಿಕ್ ಸಭಾದ ಪ್ರಾಂತೀಯ ಅಧ್ಯಕ್ಷರಾಗಿ, ಗ್ಲೋರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಮಾಯಿದೆ ದೇವುಸ್ ಚರ್ಚ್‌ನ ಸಾಮೆತ್ತಡ್ಕ ವಾಳೆಯ ಗುರಿಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲ್ಯಾನ್ಸಿ ಮಸ್ಕರೇನ್ಹಸ್‌ರವರು ಪತ್ನಿ ಮಂಗಳೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಪ್ರಿಯಲತಾ ಡಿ’ಸಿಲ್ವ, ಪುತ್ರಿಯರಾದ ಲೆರಿಸ್ಸ ಪ್ರಿನ್ಸಿ, ಲಾರಿಯಾ ಪ್ರೀಮಲ್, ಪುತ್ರ ಲ್ಯಾನ್ಸನ್ ಪ್ರೀತ್‌ರವರೊಂದಿಗೆ ಸಾಮೆತ್ತಡ್ಕದಲ್ಲಿ ವಾಸ್ತವ್ಯ ಹೊಂದಿದ್ದಾರೆ.
ಲ್ಯಾನ್ಸಿ ಮಸ್ಕರೇನ್ಹಸ್‌ರವರು 2021-22ರಲ್ಲಿ ಲಯನ್ಸ್ ಕ್ಲಬ್ ಪುತ್ತೂರ‍್ದ ಮುತ್ತು ಇದರ ಅಧ್ಯಕ್ಷರಾಗಿದ್ದ ಸಂದರ್ಭ ‘ಬೆಸ್ಟ್ ಪ್ರೆಸಿಡೆಂಟ್’ ಪ್ರಶಸ್ತಿ ಹಾಗೂ 2022-23ರಲ್ಲಿ ‘ಸಿಲ್ವರ್ ಝೋನ್ ಚೇರ್‌ಪರ್ಸನ್’ ಪ್ರಶಸ್ತಿಯನ್ನು ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ 317ಡಿ ಇವರಿಂದ ಪಡೆದುಕೊಂಡಿರುತ್ತಾರೆ.