ಪುತ್ತೂರು: ಸ.ಪ.ಪೂ ಕಾಲೇಜು ಬೆಳಿಯೂರು ಕಟ್ಟೆ ಪುತ್ತೂರು ದ.ಕ ಮಂಗಳೂರು ವಿದ್ಯುತ್‌ಚ್ಚಕ್ತಿ ನಿಗಮ ವತಿಯಿಂದ ರಾಷ್ಟ್ರೀಯ ಸುರಕ್ಷತಾ ಸಪ್ತಾಹ ವಿದ್ಯುತ್ ಜಾಗೃತಿ ಸುರಕ್ಷತಾ ಕಾರ್ಯಕ್ರಮ ಜೂ.27ರಂದು ನಡೆಯಿತು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಹಣಾ ಅಧಿಕಾರಿ ರಾಮಚಂದ್ರ ವಿದ್ಯುತ್ ಬಳಕೆದಾರರು ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಬಳಸುವುದರಿಂದ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಬಹುದೆಂದು ಅಭಿಪ್ರಾಯ ವ್ಯಕ್ತ ಪಡಿಸಿದರು .ಕಿರಿಯ ಇಂಜಿನಿಯರ್ ಸುಂದರ್ ಮಾತನಾಡಿ ವಿದ್ಯುತ್‌ಶಕ್ತಿ ನಮ್ಮ ಮೂಲಭೂತ ಅವಶ್ಯಕತೆ ಅದನ್ನು ನಿರ್ಲಕ್ಷದಿಂದ ಬಳಸಿದರೆ ಅನಾಹುತಗಳು ಸಂಭವಿಸಿ ಬದುಕಿಗೆ ತೂಂದರೆಯಾಗಬಹುದೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಹೈಸ್ಕೂಲ್ ,ಕಾಲೇಜಿನ ವಿದ್ಯಾರ್ಥಿಗಳು ,ಅಧ್ಯಾಪಕ, ಉಪನ್ಯಾಸಕರು.ಮೇಸ್ಕಾಂ ಸಿಬ್ಬಂದಿ ವಿಮೇಶ, ಲೊಕೇಶ, ಭಾಗವಹಿಸಿದರು. ಪ್ರಾಂಶುಪಾಲ ಹರಾಪ್ರಕಾಶ್ ಬೈಲಡಿ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಸುನೀತಾ ಎಂ. ವಂದಿಸಿದರು.