ದೈವಸ್ಥಾನದ ಜೀರ್ಣೋದ್ಧಾರಕ್ಕೆ ಉಳಿತಾಯ ಹುಂಡಿ ಹಣ ಸಮರ್ಪಣೆ- ಹುಟ್ಟಿದ ಹಬ್ಬದಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿದ ಯಕ್ಷಗಾನ ಕಲಾವಿದ ದಿ| ಶ್ರೀಧರ್ ಭಂಡಾರಿ ಮೊಮ್ಮಗಳು

0

ಪುತ್ತೂರು: ತರವಾಡಿನ ದೈವಸ್ಥಾನದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕಾರ್ಯಕ್ಕೆ ತನ್ನ ಉಳಿತಾಯ ಹುಂಡಿ(ಪಿಗ್ಗಿ ಬಾಕ್ಸ್)ನಲ್ಲಿದ್ದ ಹಣವನ್ನು ಸಮರ್ಪಣೆ ಮಾಡುವ ಮೂಲಕ ಹುಟ್ಟಿದ ಹಬ್ದದಿನದಂದು ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿದ ಕಾರ್ಯವು ಖ್ಯಾತ ಯಕ್ಷಗಾನ ಕಲಾವಿದ ದಿ| ಡಾ ಶ್ರೀಧರ್ ಭಂಡಾರಿ ಅವರ ಮೊಮ್ಮಗಳಾದ ಕು.ದಿಶಾ ಅವರು ಮಾದರಿಯಾಗಿದ್ದಾರೆ.

ಶ್ರೀಧರ್ ಭಂಡಾರಿ ಅವರ ಪುತ್ರಿ ಡಾ. ಅನಿಲದೀಪಕ್ ಮತ್ತು ದೀಪಕ್ ಅವರ ಪುತ್ರಿ ದಿಶಾ ಅವರು ತನ್ನ 10ನೇ ವರ್ಷದ ಹುಟ್ಟು ಹಬ್ಬವನ್ನು ಜು.1ರಂದು ಆಚರಿಸಿದರು. ಈ ಸಂದರ್ಭ ಅವರು ತನಗೆ ಮನೆಯಲ್ಲಿ ನೀಡುತ್ತಿದ್ದ ಹಣವನ್ನು ಉಳಿತಾಯ ಹುಂಡಿಯಲ್ಲಿ ಕೂಡಿಟ್ಟಿದ್ದರು. ಕೂಡಿಟ್ಟ ರೂ. 13,302 ಅನ್ನು ತಮ್ಮ ಅರಂತಾಡಿ ಸಂಕಬೈಲು ತರವಾಡು ಮನೆಯ ದೈವಸ್ಥಾನದ ಜೀರ್ಣೋದ್ದಾರಕ್ಕೆ ಸಮರ್ಪಣೆ ಮಾಡಿದರು. ಈ ಕಾರ್ಯ ಇತರರಿಗೆ ಮಾದರಿಯಾಗಬೇಕೆಂದು ಡಾ. ಅನಿಲ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here