ರಾಮಕುಂಜ ಕ.ಮಾ.ಪ್ರೌಢಶಾಲೆಯಲ್ಲಿ ಪೋಷಕರ ಸಭೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು.
ಶಾಲಾ ಶಿಕ್ಷಕರ ಪರಿಚಯವನ್ನು ಪೋಷಕರಿಗೆ ಮಾಡಲಾಯಿತು. ಶಾಲಾ ಮುಖ್ಯಗುರು ಸತೀಶ್ ಭಟ್‌ರವರು ಶಾಲಾ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕರಾದ ವೆಂಕಟೇಶ್ ದಾಮ್ಲೆರವರು ಶಾಲಾ ಪರಿಚಯ ಮಾಡಿ, ಶಾಲಾ ನಿಯಮಗಳನ್ನು ಹೇಳಿದರು. ಶಿಕ್ಷಕಿ ಪುಷ್ಪಾವತಿಯವರು ವಿದ್ಯಾರ್ಥಿಗಳಿಗೆ ನೀಡುವ ಮನೆಗೆಲಸದ ಬಗ್ಗೆ ಪೋಷರಿಗೆ ಮಾಹಿತಿ ನೀಡಿದರು. ಶಿಕ್ಷಕ ಪ್ರವೀಣ್ ಜೈನ್‌ರವರು ಶಾಲಾ ಬಸ್ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಶೋಭಾ ಕುಮಾರಿ ಪ್ರಾರ್ಥಿಸಿದರು. ಶಿಕ್ಷಕ ವಿಘ್ನೇಶ್ ಸ್ವಾಗತಿಸಿದರು. ಶಿಕ್ಷಕ ದಿನೇಶ್ ಬಿ ನಿರೂಪಿಸಿದರು. ಶಿಕ್ಷಕ ರುದ್ರನಾಯ್ಕ ವಂದಿಸಿದರು.

LEAVE A REPLY

Please enter your comment!
Please enter your name here