ಪುತ್ತೂರು: ಬೊಳುವಾರು ಸ.ಮಾ.ಹಿ.ಪ್ರಾ.ಶಾಲೆಯಲ್ಲಿ 2023-24ನೇ ಸಾಲಿನ ಮಂತ್ರಿಮಂಡಲ ರಚನೆ ಮಾಡಲಾಯಿತು.
ಶಾಲಾ ಮುಖ್ಯಮಂತ್ರಿಯಾಗಿ ಸಿಂಚನಾ ಎಸ್ ಆರ್, ಉಪಮುಖ್ಯಮಂತ್ರಿಯಾಗಿ ಮುಹಮ್ಮದ್ ಸುಹಾಜ್ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷದ ನಾಯಕಿಯಾಗಿ ಪಾತಿಮತ್ ಸಾಹಿಲ ಆಯ್ಕೆಯಾಗಿದ್ದಾರೆ. ಉಳಿದಂತೆ ಗೃಹಮಂತ್ರಿಯಾಗಿ ಕಿಶೋರ್ ಕುಮಾರ್, ಶಿಕ್ಷಣ ಮಂತ್ರಿಯಾಗಿ ಮಹಮ್ಮದ್ ರಾಝಿಕ್, ಉಪಶಿಕ್ಷಣ ಮಂತ್ರಿಯಾಗಿ ಮೊಹಮ್ಮದ್ ಹಝೀಂ, ವಾರ್ತಾಮಂತ್ರಿಯಾಗಿ ಸಿಂಚನಾ ಎಸ್.ಆರ್, ಸಾಂಸ್ಕೃತಿಕ ಮಂತ್ರಿಯಿಆಗಿ ಫಾತಿಮತ್ ಹಫೀದಾ, ಉಪಸಾಂಸ್ಕೃತಿಕ ಮಂತ್ರಿಯಾಗಿ ರೇಷ್ಮಾ, ಕ್ರೀಡಾಮಂತ್ರಿಯಾಗಿ ನಿಕಿತಾ ಕೆ, ಉಪಕ್ರೀಡಾ ಮಂತ್ರಿಯಾಗಿ ಬೇಬಿ ಆಯಿಷಾ, ಶಿಸ್ತು ಮತ್ತು ಸ್ವಚ್ಛತೆ ಮಂತ್ರಿಯಾಗಿ ಕಿಶೋರ್ ಕುಮಾರ್, ಆಯಿಷತ್ ನಸ್ರೀನಾ, ಆರೋಗ್ಯ ಮಂತ್ರಿಯಾಗಿ ಹಸ್ತ, ಅಹಾರ ಮಂತ್ರಿಯಾಗಿ ಮೋಕ್ಷ, ರಕ್ಷಣಾ ಮಂತ್ರಿಯಾಗಿ ಆಯಿಷತ್ ಶಮ್ನ, ನೀರಾವರಿ ಮಂತ್ರಿಯಾಗಿ ರೇಷ್ಮಾ, ಹಸ್ತ, ಗ್ರಂಥಾಲಯ ಮಂತ್ರಿಯಾಗಿ ಫಾತಿಮತ್ ಸಫೀದಾ, ತೋಟಗಾರಿಕಾ ಮಂತ್ರಿಯಾಗಿ ಅನ್ವಿತ್ ಅವರು ಆಯ್ಕೆಯಾಗಿದ್ದಾರೆ. ಮುಖ್ಯಗುರು ಸವಿತಾ ಸಿ.ಎ ಅವರು ಎಲ್ಲಾ ಮಂತ್ರಿಗಳಿಗೂ ಪ್ರಮಾಣವಚನ ಬೋಧಿಸಿದರು. ಅತಿಥಿ ಶಿಕ್ಷಕಿ ನವ್ಯಾ ವಿ ಸಹಕರಿಸಿದರು.