ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಜಿ ಭೇಟಿ

0

ಪುತ್ತೂರು: ಶಂಕರಾಚಾರ್ಯ ಪೀಠದ ಎಡನೀರು ಮಠದ ಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಜಿ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗೆ ಜೂ.29ರಂದು ಭೇಟಿ ನೀಡಿದರು.

ಶಿಶುಮಂದಿರ ಮಕ್ಕಳು ಭಜನೆಯ ಮೂಲಕ ಸ್ವಾಮೀಜಿಯವರನ್ನು ಸ್ವಾಗತಿಸಿದರು. ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಹೊಂದಬೇಕು. ಇಂದಿನ ಶಿಕ್ಷಣವು ರಾಜಕೀಯಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಹಿಂದಿನ ಕಾಲದಲ್ಲಿ ಶಿಕ್ಷಣವು ಪುರಾಣಗಳನ್ನು ಸಂಬಂದಿಸಿದ ಪಠ್ಯಕ್ರಮವಿತ್ತು. ಮನುಷ್ಯ ನಾಗಿ ಹುಟ್ಟುವುದು, ಉತ್ತಮ ಶಿಕ್ಷಣ, ವಿನಯ ದಿಂದ ಕೂಡಿದ ಜೀವನ ಪಡೆಯುವುದು ತುಂಬಾ ಸೌಭಾಗ್ಯಯುತಾವಾದುದು , ಸಂಸ್ಕಾರವನ್ನು ಬೆಳೆಸಿ ಉಳಿಸಿ ಉತ್ತಮ ಪ್ರಜೆಯಾಗಿ ಬಾಳಿ ಎಂದು ಆಶೀರ್ವದಿಸಿದರು.

ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರು ದಂಪತಿಗಳು ಶ್ರೀಗಳಿಗೆ ಪಾದಪೂಜೆ ನೆರವೇರಿಸಿದರು.

ಈ ಸಂದರ್ಭ ದಲ್ಲಿ ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ,ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯ, ಆಡಳಿತ ಮಂಡಳಿಯ ಸದಸ್ಯರುಗಳಾದ ಹರೀಶ್ ಪುತ್ತೂರಯ, ಅಶೋಕ್ ಕುಮಾರ್ ಪುತ್ತಿಲ, ಮುಕ್ಯೋಪಾಧ್ಯಾಯಿನಿ ಜಯಮಾಲಾ ವಿ ಎನ್ ಶಿಕ್ಷಕ-ಶಿಕ್ಷಕೇತರ ವೃಂದ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here