ಶ್ರೇಷ್ಠ ವೈದ್ಯಕೀಯ ಪ್ರಶಸ್ತಿ ಪುರಸ್ಕೃತ ಡಾ. ಅಜೇಯ್‌ರವರಿಗೆ ಪುತ್ತಿಲ ಪರಿವಾರದಿಂದ ಗೌರವ ಸನ್ಮಾನ

0

ಪುತ್ತೂರು: ಶ್ರೇಷ್ಠ ವೈದ್ಯಕೀಯ ಪ್ರಶಸ್ತಿ ಪುರಸ್ಕೃತರಾಗಿರುವ ಸರಕಾರಿ ಆಸ್ಪತ್ರೆಯ ಪ್ರಮುಖ ಮೂಳೆ ಶಸ್ತ್ರಚಿಕಿತ್ಸಕ ಡಾ.ಅಜೇಯ್ ಅವರನ್ನು ಪುತ್ತಿಲ ಪರಿವಾರದ ವತಿಯಿಂದ ಆಸ್ಪತ್ರೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಡಾ. ಅಜೇಯ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭ ಪುತ್ತಿಲ ಪರಿವಾರದ ನಗರ ಅಧ್ಯಕ್ಷ ಅನಿಲ್ ತೆಂಕಿಲ, ಕಾರ್ಯದರ್ಶಿ ಕೃಷ್ಣಪ್ರಸಾದ್ ಶೆಟ್ಟಿ, ಭೀಮ್ ಭಟ್, ಪ್ರವೀಣ್, ಪ್ರಜ್ವಲ್, ಕಿಶೋರ್, ಹರೀಶ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here