ಪುತ್ತೂರು:ಮುಂಗಾರು ತಡವಾಗಿ ಆರಂಭಗೊಂಡರೂ ಜು.3 ರಂದು ಸುರಿದ ಭಾರೀ ಮಳೆಗೆ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಭರ್ತಿಯಾಗಿದೆ.
ಇತ್ತೀಚೆಗಷ್ಟೆ ಪುಷ್ಕರಣಿಯ ಮಧ್ಯದಲ್ಲಿ ನೂತನ ಶಿಲಾಮಯ ಕಟ್ಟೆ ನಿರ್ಮಾಣಕ್ಕೆ ತಕ್ಕಷ್ಟೆ ಕೆರೆಯ ನೀರನ್ನು ಸ್ವಲ್ಪ ಮಟ್ಟಿಗೆ ಖಾಲಿ ಮಾಡಲಾಗಿತ್ತು. ಅದಾದ ಬಳಿಕ ಮುಂಗಾರು ಕೂಡಾ ವಿಳಂಬವಾದ್ದರಿಂದ ಕೆರೆಯಲ್ಲಿ ನೀರಿನ ಅಭಾವ ಉಂಟಾಗಿತ್ತು. ಆದರೆ ಜು.3 ರಂದು ಸುರಿದ ಮಳೆಗೆ ಪುಷ್ಕರಣಿ ಮಧ್ಯದಲ್ಲಿರುವ ಶಿಲಾಮಯ ಕಟ್ಟೆಯ ಮೇಲಿನ ತನಕ ನೀರು ತುಂಬಿದ್ದು ನೋಡುಗರ ಮನಸ್ಸಿಗೆ ಸಂತೋಷ ಉಂಟು ಮಾಡುತ್ತಿದೆ.