ಪುತ್ತೂರು: ಕಬ್ಬಿಣದ ಕೊಕ್ಕೆಯ ಮೂಲಕ ತೆಂಗಿನ ಮರದಿಂದ ತೆಂಗಿನ ಕಾಯಿ ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಕೊಕ್ಕೆ ವಿದ್ಯುತ್ ತಂತಿಗೆ ಸ್ಪರ್ಶಗೊಂಡು ವಿದ್ಯುತ್ ಅಪಘಾತಕ್ಕೆ ಒಳಗಾಗಿರುವ ಕೂಲಿ ಕಾರ್ಮಿಕೆ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇದೀಗ ಅವರು ಚಿಕಿತ್ಸೆಗಾಗಿ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಬಜತ್ತೂರು ಗ್ರಾಮದ ಬೆದ್ರೋಡಿ ಮರಿಯಮ್ಮ ಯಾನೆ ಮಾಯ(38ವ) ಎಂಬವರು ವಿದ್ಯುತ್ ಅಪಘಾತಕ್ಕೀಡಾದವರು. ಅವರು ಜೂ.1ರಂದು ಬೆಳ್ತಂಗಡಿ ತಾಲೂಕಿನ ಕನ್ಯಾಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವೇಳೆ ಅವರು ತೆಂಗಿನ ಮರದಿಂದ ತೆಂಗಿನ ಕಾಯಿ ತೆಗೆಯಲು ಕಬ್ಬಿಣದ ರಾಡ್ ಬಳಸಿದ್ದರು. ಆಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ರಾಡ್ ಸ್ಪರ್ಶಿಸಿ ಅವರಿಗೆ ವಿದ್ಯುತ್ ಅಪಘಾತವಾಗಿದೆ. ಇದರಿಂದ ಗಂಭೀರ ಸ್ವರೂಪದ ಗಾಯವಾಗಿದ್ದು, ಅವರನ್ನು ಆರಂಭದಲ್ಲಿ ಉಜಿರೆ ಬೆನಕ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅವರ ಸ್ಥಿತಿ ಸುಧಾರಿಸಿಲ್ಲ ಎಂದು ಮರಿಯಮ್ಮ ಅವರು ಭಿನ್ನವಿಸಿದಂತೆ ಜೂ.6ರಂದು ಅವರನ್ನು ಪುತ್ತೂರು ಧನ್ವಂತರಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಮೊದಲಿಗಿಂತ ಆರೋಗ್ಯ ಸುಧಾರಿಕೆಯಲ್ಲಿದ್ದು, ಆಸ್ಪತ್ರೆಯ ಚಿಕಿತ್ಸಾ ಹಣ ಪಾವತಿಗೆ ಸಾಧ್ಯವಾಗುತ್ತಿಲ್ಲ. ಇದಲ್ಲದೆ ಇನ್ನೂ ಹಲವು ದಿನಗಳ ತನಕ ಅವರಿಗೆ ಚಿಕಿತ್ಸೆ ಬೇಕಾಗಿರುವುದರಿಂದ ಬಡ ಕುಟುಂಬಕ್ಕೆ ಅಷ್ಟೊಂದು ಹಣ ಹೊಂದಿಸಲು ಅಸಾಧ್ಯವಾಗಿದೆ. ದಾನಿಗಳಿದ್ದಲ್ಲಿ ಮರಿಯಮ್ಮ ಅವರಿಗೆ ಆರ್ಥಿಕ ನೆರವು ನೀಡುವಂತೆ ಮರಿಯಮ್ಮ ವಿನಂತಿಸಿದ್ದಾರೆ. ಅವರ ಬ್ಯಾಂಕ್ ಖಾತೆ ಸಂಖ್ಯೆ 39959780344 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಎಫ್‌ಸಿ ಕೋಡ್ ಎಸ್‌ಬಿಐಎನ್ 0040152. ಮೊಬೈಲ್: 7348857054, 7899971070 ಅನ್ನು ಸಂಪರ್ಕಿಸಬಹುದು.