ಪುತ್ತೂರು: ಕಬಕ ಗ್ರಾಪಂ ವ್ಯಾಪ್ತಿಯ ಕಲ್ಲೆಗ-ಮಾಡತ್ತಾರ್- ಪುಣ್ಯಕುಮಾರ್ ರಸ್ತೆಯನ್ನು ದುರಸ್ಥಿ ಮಾಡುವಂತೆ ಆಗ್ರಹಿಸಿ ನಾಗಕರಿಕರು ಕಬಕ ಗ್ರಾಪಂ ಪಿಡಿಒರವರಿಗೆ ಮನವಿ ಮಾಡಿದ್ದಾರೆ.
ಈ ರಸ್ತೆಯು ಸುಮಾರು 500 ಮೀಟರ್ ವ್ಯಾಪ್ತಿಯಿದ್ದು ಈ ರಸ್ತೆಯ ದುರಸ್ಥಿಗಾಗಿ ಕೆಆರ್‌ಡಿಎಲ್‌ನವರಿಗೆ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿ ನಡೆಸಲು ಇದ್ದ ರಸ್ತೆಯನ್ನು ಅಗೆದು ಹಾಕಲಾಗಿದೆ. ಇದೀಗ ಮಳೆಗೆ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ವಾಹನ ಚಾಲಕರಿಗೆ ಮತ್ತು ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ. ಶಾಲಾ ಮಕ್ಕಳು ಈ ರಸ್ತೆಯಲ್ಲಿ ನಡೆದಾಡಲಾಗದ ಸ್ಥಿತಿ ನಿರ್ಮಾಣವಾಗಿದ್ದು ಅಗೆದು ಹಾಕಿ ಕಾಮಗಾರಿಯನ್ನು ಮಾಡದೆ ಸಾರ್ವಜನಿಕರಿಗೆ ತೊದರೆಯಾಗಿದೆ.10 ದಿವಸದೊಳಗೆ ರಸ್ತೆಯನ್ನು ದುರಸ್ಥಿ ಮಾಡದೇ ಇದ್ದಲ್ಲಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪುತ್ತೂರು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್,ಕಬಕ ವಲಯಾಧ್ಯಕ್ಷ ದಾಮೋದರ ಮುರ, ಬೂತ್ ಅಧ್ಯಕ್ಷ ಸುಂದರ ಸಫಲ್ಯ, ಪ್ರಧಾನ ಕಾರ್ಯದರ್ಶಿ ರಶೀದ್ ಮುರ, ಪ್ರಶಾಂತ್ ಮುರ, ವಸಂತ ಪೂಜಾರಿ ಶೇವಿರೆ, ಶರೀಫ್ ಮೂಲೆಕ್ಕಾಡ್, ಅಬ್ಬಾಸ್ ಮೂಲೆಕ್ಕಾಡ್, ಅನಂತಪ್ರಸಾದ್ ಶೇವಿರೆ, ಚಂದ್ರಹಾಸ ಗೌಡ ಶೇವಿರೆ, ದೇವಕಿ ಕಲ್ಲೆಗ, ಹೇಮಾವತಿ ಮಾಡತ್ತಾರು, ಮತ್ತು ಸಂಜೀವ ಪೂಜಾರಿ ಮುರ ಉಪಸ್ಥಿತರಿದ್ದರು.