ಟೈಲರ್‍ಸ್ ಅಸೋಸಿಯೇಶನ್ ಕುಂಬ್ರ ವಲಯ ಸಮಿತಿಗೆ ಆಯ್ಕೆ

0

ಅಧ್ಯಕ್ಷ: ಲತೀಫ್ ಎಸ್, ಪ್ರ.ಕಾರ್ಯದರ್ಶಿ: ಬಿ.ಸಿ ಚಿತ್ರ, ಕೋಶಾಧಿಕಾರಿ: ನಿರ್ಮಲ

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸಿಯೇಶನ್ ಕುಂಬ್ರ ವಲಯ ಸಮಿತಿ ಮಹಾಸಭೆ ಕೆದಂಬಾಡಿ ಗ್ರಾ.ಪಂ ಸಭಾಭವನದಲ್ಲಿ ಜು.2ರಂದು ನಡೆಯಿತು ಕುಂಬ್ರ ವಲಯ ಸಮಿತಿಯ ಅಧ್ಯಕ್ಷ ಆನಂದ ರೈ ಮಠ ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ಬಿ.ಸಿ ಚಿತ್ರ ವಾರ್ಷಿಕ ವರದಿ ಮಂಡಿಸಿದರು ಮುಖ್ಯ ಅತಿಥಿಯಾಗಿದ್ದ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಜಯರಾಮ ಪೂಜಾರಿ ಇವರು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ 90% ಗಿಂತ ಅಧಿಕ ಅಂಕ ಗಳಿಸಿದ ಟೈಲರ್ ವೃತ್ತಿ ಭಾಂದವರ ಮಕ್ಕಳಿಗೆ (ಟೈಲರ್ ಐಡಿ ನವೀಕರಣ ಆಗಿರಬೇಕು) ಜುಲೈ 30 ರಂದು ಪೂತ್ತೂರು ಕ್ಷೇತ್ರ ಸಮಿತಿಯ ಮಹಾಸಭೆಯಲ್ಲಿ ಸನ್ಮಾನಿಸಲಾಗುವುದು ಎಂದು ಹೇಳಿದರು.


ನಂತರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಲತೀಫ್ ಎಸ್ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಸಿ ಚಿತ್ರ ಆಯ್ಕೆಯಾದರು. ಕೋಶಾಧಿಕಾರಿಯಾಗಿ ನಿರ್ಮಲ, ಉಪಾಧ್ಯಕ್ಷರಾಗಿ ಪೂರ್ಣಿಮಾ ಭಟ್, ಜೊತೆ ಕಾರ್ಯದರ್ಶಿಯಾಗಿ ವಿಠಲ ಶೆಟ್ಟಿ ಆಯ್ಕೆಯಾದರು.ಸದಸ್ಯರಾಗಿ ಆನಂದ ರೈ ಮಠ, ವಿಶ್ವನಾಥ ರೈ ಕುಂಬ್ರ, ಗೀತಾ ಎಸ್ ರೈ, ವಿಜಯ ರೈ, ರಘುಚಂದ್ರ ಭಟ್ ಆಯ್ಕೆಯಾದರು. ಲೀಲಾ ರೈ ಪ್ರಾರ್ಥಿಸಿದರು. ವಿಜಯ ರೈ ಸ್ವಾಗತಿಸಿದರು. ಬಿ.ಸಿ ಚಿತ್ರ ವಂದಿಸಿದರು.

LEAVE A REPLY

Please enter your comment!
Please enter your name here