ಕಡಬದಲ್ಲಿ ಬಿಲ್ಲವ ಸಂಘದ ಉಭಯ ವಲಯದ ವಾರ್ಷಿಕ ಮಹಾಸಭೆ: ಬಡ ಕುಟುಂಬದ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

0

ಕಡಬ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಕಡಬ ಮತ್ತು ಮರ್ದಾಳ ವಲಯದ 23ನೇ ವಾರ್ಷಿಕ ಮಹಾಸಭೆ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಜುಲೈ 2 ರಂದು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಪುತ್ತೂರು ಬಿಲ್ಲವ ಸಂಘದ ಉಪಾಧ್ಯಕ್ಷ ಡಾ. ಸದಾನಂದ ಕುಂದರ್ ಅವರು ಮಾತನಾಡಿ, ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿರಿ ಎಂಬ ನಾರಾಯಣ ಗುರುಗಳ ಮಾತುಗಳನ್ನು ಎಲ್ಲರೂ ಅನುಸರಿಸೋಣ. ಸಮಾಜ ಬಲಿಷ್ಠವಾಗಲು ವಿದ್ಯೆ ಸಹಕಾರಿ ಎಂದರಲ್ಲದೆ ತಾಲೂಕು ಬಿಲ್ಲವ ಸಂಘ ರಚನೆಯಾಗಲು ಒಟ್ಟಾಗಿ ಶ್ರಮಿಸೋಣವೆಂದರು.

ಕಡಬ ವಲಯದ ಕಾರ್ಯದರ್ಶಿ ದೀಕ್ಷಿತ್ ಪಣೆಮಜಲು ವಾರ್ಷಿಕ ವರದಿ ಮಂಡಿಸಿದರು. ಮುಖ್ಯ ಅತಿಥಿಯಾಗಿ ಮಹೇಶ್ಚಂದ್ರ ಸಾಲಿಯನ್ ,ಚಂದ್ರಕಲಾ ಮುಕ್ವೆ, ಬಿಲ್ಲವ ಯುವವಾಹಿನಿ ಘಟಕ ಅಧ್ಯಕ್ಶ ಕೃಷ್ಣಪ್ಪ ಅಮೈ , ನೂಜಿಬಾಳ್ತಿಲ ಗ್ರಾಮ ಸಮಿತಿಯ ಅಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು ಸಮಯೋಚಿತವಾಗಿ ಮಾತನಾಡಿದರು. ಬಳಿಕ ಬಿಲ್ಲವ ಸಂಘದ ಬಡ ಕುಟುಂಬದ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಬಳಿಕ ವಲಯ ಬಿಲ್ಲವ ಸಂಘದ ಸಂಚಾಲಕ ಜಯಪ್ರಕಾಶ್ ದೋಳ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಯಶೋಧ, ಗೀತಾ ಉಂಡಿಲ, ಹಾಗೂ ಎರಡು ವಲಯದ 6 ಜನ ಗ್ರಾಮ ಸಮಿತಿ ಅಧ್ಯಕ್ಷರುಗಳು ವೇದಿಕೆಯಲ್ಲಿದ್ದರು. ಕುಮಾರಿ ತೃಸ್ವಿ ಪ್ರಾರ್ಥನೆ ನೆರವೇರಿಸಿ, ಮರ್ಧಾಳ ವಲಯದ ಸಂಚಾಲಕರ ಸತೀಶ್ ಕೆ ಪ್ರಾಸ್ತವಿಕ ವಾಗಿ ಮಾತನಾಡಿದರು.

ಕಡಬ ವಲಯದ ಪದಾಧಿಕಾರಿಗಳ ವಿವರ , ಕಡಬ ಕುಟ್ರುಪ್ಪಾಡಿ – ಲಕ್ಷ್ಮಿಶ ಬಂಗೇರ, ಕೋಡಿಂಬಾಳ- ಸುರೇಶ್ ಪಾಲಪ್ಪೆ, ಬಲ್ಯ -ಹರೀಶ್ ಡಿ ಎಚ್ ಆಯ್ಕೆಯಾದರು.
ಮಹಿಳಾ ಸಮಿತಿಯಲ್ಲಿ ಕಡಬ ಕುಟ್ರುಪ್ಪಾಡಿ -ಜಯಂತಿ ನಂದೋಲಿ, ಬಲ್ಯ – ಕೃತಿಕಾ ಸದಾಶಿವ ಪೂಜಾರಿ ,.ಕೋಡಿಂಬಾಳ – ಶ್ವೇತ ಆಯ್ಕೆಯಾದರು.

ಮರ್ಧಳ ವಲಯ ಪದಾಧಿಕಾರಿಗಳ ವಿವರ : ನೂಜಿಬಳ್ತಿಲ – ವಸಂತ ಬದಿ ಬಾಗಿಲು, ರೆಂಜಿಲಾಡಿ- ಸಂಜೀವ ಪೂಜಾರಿ ನೈಲ, ಬಂಟ್ರ ನೆಕ್ಕಿಲಾಡಿ ಐತ್ತೂರು – ಧನಂಜಯ ಕೋಕಲ,ಕೊಂಬಾರು ನೆಟ್ಟಣ- ನೋಣಯ್ಯ ಕೆ ಆಯ್ಕೆಯಾದರು. ಮಹಿಳಾ ಸಮಿತಿಗೆ ನೂಜಿಬಾಳ್ತಿಲ – ಅನಿತ ಕಂಪ, ರೇಂಜಿಲಾಡಿ – ಪುಷ್ಪ ನೈಲ,ಬಂಟ್ರ ನೆಕ್ಕಿಲಾಡಿ ಐತ್ತೂರು -ರಾಜೀವಿ ಐತ್ತೂರು,ಕೊಂಬಾರು ನೆಟ್ಟಣ – ಕುಮಾರಿ ವಾಸುದೇವನ್ ಆಯ್ಕೆಯಾದರು.

LEAVE A REPLY

Please enter your comment!
Please enter your name here