ಬೆಳ್ಳಾರೆಯಲ್ಲಿ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 9ನೇ ಶಾಖೆ ಉದ್ಘಾಟನೆ

0

ಪುತ್ತೂರು: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಇದರ ಪ್ರಾಯೋಜಕತ್ವದಲ್ಲಿ ಪ್ರಾರಂಭಗೊಂಡಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 9ನೇ ಶಾಖೆಯು ಜು.6ರಂದು ಬೆಳ್ಳಾರೆಯ ಕಾತ್ಯಾಯಿನಿ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಂಡಿತ್ತು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಇದರ ಕಾವೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಅವರು ನೂತನ ಶಾಖೆಯನ್ನು ಉದ್ಘಾಟಿಸಿದರು.

ಸರಕಾರ ಮಾಡದನ್ನು ಸಹಕಾರಿ ಕ್ಷೇತ್ರ ಮಾಡಿ ತೋರಿಸುತ್ತಿದೆ -ಸಂಜೀವ ಮಠಂದೂರು
ಸಹಕಾರ ಸಂಘ ಎಲ್ಲರಿಗೂ ಆರ್ಥಿಕ ಚೈತನ್ಯ ನೀಡುತ್ತದೆ. ಹಾಗಾಗಿ ಇದು ಹುಟ್ಟಿನಿಂದ ಚಟ್ಟದ ತನಕ ಎಲ್ಲವನ್ನು ಕೊಡಲು ಸಹಕಾರಿ ಬಂದಿದೆ. ಪ್ರತಿ ಜಾತಿ, ಭೌಗೋಳಿಕವಾಗಿ ಸಹಕಾರಿ ಸಂಘ ಇದೆ. ಇದು ವ್ಯಕ್ತಿಯ ಅವಿಭಾಜ್ಯ ಅಂಗವಾಗಿದೆ. ಸರಕಾರ ಮಾಡದನ್ನು ಸಹಕಾರಿ ಕ್ಷೇತ್ರ ಮಾಡಿ ತೋರಿಸುತ್ತಿದೆ ಎಂದರು.

ಬೆಳ್ಳಾರೆ ಖಜಾನೆಯ ತಾಣವಾಗಿ ಸಂಘ ಯಶಸ್ಸು ಕಾಣಲಿ -ಶ್ರೀ ಧರ್ಮಪಾಲನಾಥ
ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮಿಜಿ ಅವರು ಆಶೀರ್ವಚನ ನೀಡಿದರು. ನನ್ನದು, ನಮ್ಮದು, ನಾವೇ ಎಂಬ ಮನಸ್ಸಿದ್ದಾಗ ಕಾರ್ಯ ಯಶಸ್ವಿ ಆಗುತ್ತದೆ. ಬೆಳ್ಳಾರೆ ಹಿಂದೆ ಬ್ರಿಟೀಷರ ಖಜಾನೆಯಾಗಿತ್ತು. ರಾಮಯ್ಯ ಗೌಡರು ಖಜಾನೆಗೆ ದಾಳಿ ಮಾಡಿದ್ದರು. ಇದೀಗ ಸಮುದಾಯದ ಪತ್ತಿನ ಸಹಕಾರ ಸಂಘವು ಇಲ್ಲಿಗೆ ಬಂದಿದೆ. ಅದು ಬೆಳ್ಳಾರೆಯ ಖಜಾನೆಯ ತಾಣವಾಗಿ ಮೂಡಿ ಬರಲಿ ಎಂದ ಅವರು ನವಶಕ್ತಿಯ ಪ್ರತೀಕವಾಗಿ 9ನೇ ಶಾಖೆ ಉದ್ಘಾಟನೆಯಾಗಿದೆ. ಹಣಕಾಸಿನ ವಿಚಾರದಲ್ಲಿ ಶಕ್ತಿಯ ಸಂಚಲನ ಇಲ್ಲಿ ಇರುತ್ತದೆ‌. ಈ ಸಂಸ್ಥೆ ಎತ್ತರೋತ್ತರವಾಗಿ ಬೆಳೆಯಲಿ ಎಂದರು.

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಗಣಕಯಂತ್ರಕ್ಕೆ ಚಾಲನೆ ನೀಡಿದರು‌. ಒಕ್ಕಲಿಗ ಗೌಡ ಸೇವ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ವಿಶ್ವನಾಥ ಗೌಡ ಕೆ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ಸಂಚಾಲಕ ಎಂ.ಪಿ.ಉಮೇಶ್, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್, ಪುತ್ತೂರು ಉಪವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ತ್ರಿವೇಣಿ ರಾವ್ ಕೆ, ಕಾತ್ಯಾಯಿನಿ ಕಾಂಪ್ಲೆಕ್ಸ್ ಮಾಲಕ ಬಿ ಪವನ್ ಶೆಣೈ ಅತಿಥಿಗಳಾಗಿ ಭಾಗವಹಿಸಿದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಸುದರ್ಶನ ಗೌಡ ಕೆ, ಸಂಜೀವ ಗೌಡ ಕೆ, ಸತೀಶ್ ಪಾಂಬಾರು, ಪ್ರವೀಣ್ ಕುಂಟ್ಯಾನ, ಲೋಕೇಶ್ ಚಾಕೋಟೆ, ಸುಪ್ರೀತಾ ರವಿಚಂದ್ರ, ತೇಜಸ್ವಿನಿ ಶೇಖರ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ, ಆಂತರಿಕ ಲೆಕ್ಕಪರಿಶೋಧಕರು ಶ್ರೀಧರ್ ಗೌಡ ಕಣಜಾಲು, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಉಪಾಧ್ಯಕ್ಷರು ಲಿಂಗಪ್ಪ ಗೌಡ ತೆಂಕಿಲ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ಸಂಘದ ಸಲಹಾ ಸಮಿತಿ ಸದಸ್ಯರಾದ ಎಲ್ಯಣ್ಣ ಗೌಡ ಕುಳ್ಳಂಪಾಡಿ, ಉಮೇಶ್ ಗೌಡ ಕಾನಾವು, ವಾಸುದೇವ ನಡ್ಕ, ಉಮೇಶ್ ಗೌಡ, ಮುರಳೀಧರ ಗೌಡ ಕೆಮ್ಮಾರ, ರವೀಂದ್ರ ಗೌಡ ಮರಕಡ, ಪದ್ಮನಾಭ ಬೀಡು, ಸಿ ಕೆ ನಾರಾಯಣ ಗೌಡ ಆರುವಾರ, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು‌.

LEAVE A REPLY

Please enter your comment!
Please enter your name here