ಬಪ್ಪಳಿಗೆ: ಗ್ರೀನ್ ವ್ಯೂವ್ ಶಾಲೆಯಲ್ಲಿ ಪ್ಲೇ ಸ್ಕೂಲ್ ಉದ್ಘಾಟನೆ; ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಸನ್ಮಾನ

0

ಪುತ್ತೂರು: ಗ್ರೀನ್ ವ್ಯೂವ್ ಮೈನಾರಾಟಿ ಎಜ್ಯುಕೇಶನ್ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆಯುತ್ತಿರುವ ಬಪ್ಪಳಿಗೆ ಗ್ರೀನ್ ವ್ಯೂವ್ ಶಾಲೆಯಲ್ಲಿ ಪ್ಲೇ ಸ್ಕೂಲ್ ಉದ್ಘಾಟನೆ,
ಪದ್ಮಶ್ರೀ ಹರೇಕಳ ಹಾಜಬ್ಬ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಡಾ|| ನಝೀರ್ ಅಹಮ್ಮದ್‌ರವರ ಸಹಯೋಗದಲ್ಲಿ ಉಚಿತ ರಕ್ತದೋತ್ತಡ, ಮಧುಮೇಹ ತಪಾಸಣಾ ಶಿಬಿರವು ಜು.5ರಂದು ನಡೆಯಿತು.

ಪದ್ಮಶ್ರೀ ಹರೇಕಳ ಹಾಜಬ್ಬರವರು ಮಕ್ಕಳಿಗೆ ಕಿತ್ತಳೆ ಹಣ್ಣು ಹಾಗೂ ಪುಸ್ತಕ ವಿತರಿಸುವ ಮೂಲಕ ಗ್ರೀನ್ ವ್ಯೂವ್ ಪ್ಲೇ ಸ್ಕೂಲ್ ಉದ್ಘಾಟಿಸಿದರು. ಬಳಿಕ ಅವರಿಗೆ ಸಂಸ್ಥೆಯ ವತಿಯಿಂದ ಶಾಲು, ಮಾಲಾರ್ಪಣೆ ಹಾಕಿ, ಪೇಟವಿಟ್ಟು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಹರೇಕಳ ಹಾಜಬ್ಬ ಅವರು, ಮಾಧ್ಯಮ ಮಿತ್ರರು ನನ್ನನ್ನು ಗುರುತಿಸಿದ್ದರಿಂದ ನನ್ನ ಕನಸಿನ ಶಾಲಾ ಆರಂಭಕ್ಕೆ ಮತ್ತು ದೇಶದ ಅತ್ಯುನ್ನತ ಪದ್ಮಶ್ರೀ ಪಡೆಯಲು ಹಾಗೂ ದೇಶದ ಪ್ರಧಾನಿ, ರಾಷ್ಟ್ರಪತಿಯ ಭೇಟಿ ಸಾಧ್ಯವಾಯಿತು. ಮಾತ್ರವಲ್ಲ ಹರೇಕಳ ಶಾಲೆಗೆ ರೂ.1ಕೋಟಿ ಅನುದಾನ ಬರಲು ಸಾಧ್ಯವಾಯಿತು ಎಂದು ಹೇಳಿದರು. ವಿವಿಧ ಕಡೆಗಳಿಗೆ ತೆರಳಿ ಕಿತ್ತಾಳೆ ಹಣ್ಣು ಮಾರಾಟ ಮಾಡಿದ ನನ್ನ ಕೈಯಿಂದಲೇ ಇಂದು ಬಪ್ಪಳಿಗೆಯಲ್ಲಿ ಮಕ್ಕಳ ಬಾಳಿನ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಯನ್ನು ಉದ್ಘಾಟಿಸಿರುವುದು ನನಗೆ ಅತೀವ ಸಂತೋಷ ಆಗಿದೆ. ಇಲ್ಲಿ ಕಲಿಯುವ ಪುಟ್ಟ ಮಕ್ಕಳು ಭವಿಷ್ಯದಲ್ಲಿ ಬಹುದೊಡ್ಡ ವ್ಯಕ್ತಿಗಳಾಗಿ ಬಾನೆತ್ತರಕ್ಕೆ ಏರುವಂತಾಗಲಿ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಹೇಳಿದ ಅವರು, ಈ ಹಿಂದೆ ಪುತ್ತೂರು ಹಾಗೂ ಉಪ್ಪಿನಂಗಡಿಯಲ್ಲೂ ಕಿತ್ತಳೆ ಹಣ್ಣು ಮಾರಾಟ ಮಾಡಿದ ಅನುಭವ ನನಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ರವರು ಗ್ರೀನ್ ವ್ಯೂವ್ ಎಜ್ಯುಕೇಶನ್ ಟ್ರಸ್ಟ್‌ನ ವತಿಯಿಂದ ಆರಂಭಿಸಲಾದ ಶಾಲೆಯ ಸಂಪೂರ್ಣ ಮಾಹಿತಿಯುಳ್ಳ ಗ್ರೀನ್ ವ್ಯೂವ್ ಆಪ್ ಬಿಡುಗಡೆಗೊಳಿಸಿ ಮಾತನಾಡಿ, ಶಿಕ್ಷಣಕ್ಕಿರುವ ಶಕ್ತಿ ಯಾವುದೇ ವಸ್ತುಗಳಿಗೆ ಇಲ್ಲ. ಉತ್ತಮ ಜೀವನ ನಡೆಸಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ. ಹಿಂದಿನ ಕಾಲದಲ್ಲಿ ಶಿಕ್ಷಣಕ್ಕೆ ಒತ್ತು ನೀಡುವುದಾಗಲಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುನೀಡುವುದಾಗಲಿ ಅಷ್ಟಾಗಿ ಇರಲಿಲ್ಲ. ಆದರೆ ಇವತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ನಾವು ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದೇವೆ ಎಂದು ಹೇಳಿದರು.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಎನ್.ಕೆ. ಜಗನ್ನಿವಾಸ ರಾವ್‌ರವರು ಮಾತನಾಡಿ, ಬಪ್ಪಳಿಗೆಯಲ್ಲಿ ಉದ್ಘಾಟಿಸಲಾದ ಗ್ರೀನ್ ವ್ಯೂವ್ ಶಿಕ್ಷಣ ಸಂಸ್ಥೆಯು ಪುತ್ತೂರು ತಾಲೂಕಿನಲ್ಲೇ ಆದರ್ಶ ಶಾಲೆಯಾಗಿ ಮೂಡಿ ಬರಲಿ. ವಿದ್ಯೆ ಮತ್ತು ಅನ್ನದಾನ ಶ್ರೇಷ್ಠ ದಾನವಾಗಿದ್ದು ಇದನ್ನು ನೀಡಲು ಮುಂದೆ ಬಂದು ಎಲ್ಲರಿಗೂ ಶಿಕ್ಷಣ ನೀಡಬೇಕಾಗಿದೆ ಎಂದರು. ಸಮಾಜ ಸೇವೆ ಮಾಡುವವರನ್ನು ಸಮಾಜ ಯಾವತ್ತೂ ಜ್ಞಾಪಿಸಿಕೊಳ್ಳುತ್ತದೆ. ಸಮಾಜದಲ್ಲಿ ಇಂದು ಒಳ್ಳೆಯ ವಾತಾವರಣ ನಿರ್ಮಾಣ ಆಗಬೇಕು. ಶಾಂತಿ, ಸೌಹಾರ್ದತೆ ಮೂಡಿ ಬರಬೇಕು, ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ದೊರೆಯಲಿ ಎಂದು ಹೇಳಿದರು.

ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡರವರು ಮಾತನಾಡಿ, ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಬೇಕಾದರೆ ಬಹಳ ಕಷ್ಟವಿದೆ. ಈ ವಿದ್ಯಾಸಂಸ್ಥೆಯು ಕೆಲವು ವರ್ಷದ ಹಿಂದೆ ಹಿನ್ನಡೆ ಕಂಡರೂ ಬಳಿಕ ಎಲ್ಲರ ಸಹಕಾರದಿಂದ ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ಹರೇಕಳ ಹಾಜಬ್ಬರವರು ಸರಳ ಸಜ್ಜನಿಕೆಯ ವ್ಯಕ್ತಿ. ಬಡತನವಿದ್ದರೂ ತನ್ನ ಮನಸ್ಸನ್ನು ಶಿಕ್ಷಣಕ್ಕೆ ಮೀಸಲಿರಿಸಿದರು. ಶಿಕ್ಷಣ ಪ್ರೇಮಿಯಾಗಿ ಶಾಲೆಯನ್ನು ಕಟ್ಟಿ ಬೆಳೆಸಿದ್ದು ನೋಡಿದರೆ ನಾವೆಲ್ಲರು ಅವರೆದರು ಏನೂ ಅಲ್ಲ. ಅವರ ಸರಳ ಜೀವನದಂತೆ ನಡೆದರೆ ಸಮಾಜದಲ್ಲಿ ಬಡತನ ನೀಗಿಸಲು ಸಾಧ್ಯವಿದೆ ಎಂದು ಹೇಳಿದರು.

ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಜಾಕ್ ಹಾಜಿ ರವರು ಮಾತನಾಡಿ, ಪುತ್ತೂರಿನ ಹೃದಯ ಭಾಗವಾದ ಬಪ್ಪಳಿಗೆಯಲ್ಲಿ ಮದ್ರಸ ಕಟ್ಟಡವನ್ನು ಬಳಸಿಕೊಂಡು ಈ ಪರಿಸರದ ಮಕ್ಕಳಿಗೆ ಶಿಕ್ಷಣವನ್ನು ಕೊಡಲು ಮುಂದೆ ಬಂದಿರುವ ಇಲ್ಲಿನ ಗ್ರೀನ್ ವ್ಯೂವ್ ಮೈನಾರಿಟಿ ಸಂಸ್ಥೆಯವರ ಸೇವೆ ಶ್ಲಾಘನೀಯವಾಗಿದ್ದು, ಇದು ಬೇರೆಲ್ಲ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಹೇಳಿದರು.

ನ್ಯಾಯವಾದಿ ಎಂ.ಪಿ.ಅಬೂಬಕ್ಕರ್‌ರವರು ನವರತ್ನಗಳು ಎಂಬ ಪುಸ್ತಕವನ್ನು ಪ್ರಕಟಿಸಿದ್ದು ಇದರಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ಅವರ ಕುರಿತ ಕವಿತೆಯನ್ನು ಪ್ರಕಟಿಸಲಾಗಿದ್ದು ಈ ಪುಸ್ತಕವನ್ನು ಬಿ.ಇ.ಒ ಅವರ ಮೂಲಕ ಹಾಜಬ್ಬ ಅವರಿಗೆ ಹಸ್ತಾಂತರಿಸಲಾಯಿತು. ಬಳಿಕ ಎಂ.ಪಿ ಅಬೂಬಕ್ಕರ್‌ರವರು ಮಾತನಾಡಿ ಆದರ್ಶ ವ್ಯಕ್ತಿ ಹರೇಕಳ ಹಾಜಬ್ಬ ಅವರಿಂದ ಪ್ಲೇ ಸ್ಕೂಲ್ ಉದ್ಘಾಟನೆಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಶಾಲೆಯ ಅಭಿವೃದ್ಧಿಗಾಗಿ ಊರಿನ ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದಾಗ ಉತ್ತಮ ಶಾಲೆಯಾಗಿ ಮೂಡಿ ಬರಲಿದೆ. ಈ ಶಾಲೆಯ ಮೂಲಕ ನಾಡಿನಲ್ಲಿ ಸೌಹಾರ್ದತೆ ಬೆಳೆಯಲಿ ಎಂದು ಹೇಳಿದರು. ರೋಟರಿ ಕ್ಲಬ್ ಅಧ್ಯಕ್ಷ ಜಯರಾಜ್ ಭಂಡಾರಿಯವರು ಮಾತನಾಡಿ ಈ ವಿದ್ಯಾ ಸಂಸ್ಥೆಯು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಬಪ್ಪಳಿಗೆ ಮಸೀದಿಯ ಸದರ್ ಮುಅಹಲಿಮ್ ಮೊಹಮ್ಮದ್ ಶಾಫಿ ಮೌಲವಿ ಅವರು ದು:ವಾಶೀರ್ವಚನ ನೀಡಿದರು. ಗ್ರೀನ್ ವ್ಯೂವ್ ಮೈನಾರಿಟಿ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅಬ್ದುಲ್ ಹಮೀದ್ ಲೌಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಪ್ಪಳಿಗೆಯಲ್ಲಿ ಉದ್ಘಾಟನೆಗೊಂಡಿರುವ ಈ ಪ್ಲೇ ಸ್ಕೂಲ್‌ನ ನಿರ್ಮಾಣದಲ್ಲಿ ಮತ್ತು ಇದರ ಬೆಳವಣಿಗೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಈ ಗ್ರೀನ್ ವ್ಯೂವ್ ಶಾಲೆ ಅತ್ಯುತ್ತಮ ಶಾಲೆ ಎಂದು ಇಲಾಖೆ ವತಿಯಿಂದ ಗುರುತಿಸಲ್ಪಟ್ಟಿದೆ. ಶಾಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಯಾಚಿಸಿದರು.

ಸನ್ಮಾನ: ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್ ಯಂ, ಅಮೃತಕಲಾ, ಬಪ್ಪಳಿಗೆ ಮಸೀದಿ ಮಾಜಿ ಅಧ್ಯಕ್ಷ ಯೂಸೂಪ್ ಹಾಜಿ ಕೆ.ವೈಪಿ, ಬಪ್ಪಳಿಗೆ ಬೀಟ್ ಪೊಲೀಸ್ ಭೀಮ್ ಸೇನ್, ಸಾಮಾಜಿಕ ಮುಂದಾಳು ಅಶೋಕ್ ರಾವ್ ಬಪ್ಪಳಿಗೆ, ನ್ಯಾಯವಾದಿ ಮತ್ತು ನೋಟರಿ ಎಂ.ಪಿ ಸ್ಕೂಲ್ ಮುರದ ಪ್ರಾಂಶುಪಾಲ ಎಂ.ಪಿ.ಅಬೂಬಕ್ಕರ್, ಎನ್.ಕೆ. ಜಗನ್ನಿವಾಸ್ ರಾವ್, ಇಮ್ತಿಯಾಜ್ ಹಲವರು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.

ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್, ಅಮೃತಕಲಾ, ಯುಸೂಪ್ ಹಾಜಿ ಬಪ್ಪಳಿಗೆ ಕೆವೈಪಿ, ಮರೀಲ್ ಇ.ಎಸ್.ಆರ್ ಶಾಲೆಯ ಅಧ್ಯಕ್ಷ ಜಾಕೀರ್ ಹುಸೈನ್, ಬಪ್ಪಳಿಗೆ ಬೀಟ್ ಪೊಲೀಸ್ ಭೀಮ್ ಸೇನ್, ಎನ್.ಆರ್.ಜೆ ಸದಸ್ಯ ಜಾಬೀರ್ ಬಪ್ಪಳಿಗೆ, ಸಾಮಾಜಿಕ ಮುಂದಾಳು ಅಶೋಕ್ ರಾವ್ ಬಪ್ಪಳಿಗೆ, ಸಾಲ್ಮರ ದಾರೂಲ್ ಅಸನೀಯ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಹಸೈನಾರ್ ಹಾಜಿ ಸಿಟಿ ಬಝಾರ್, ಗ್ರೀನ್ ವ್ಯೂವ್ ಸ್ಕೂಲ್‌ನ ಕೋಶಾಧಿಕಾರಿ ಡಾ. ನಝೀರ್ ಅಹಮ್ಮದ್, ಪುತ್ತೂರು ಡೆಂಟಲ್ ಸರ್ಜನ್ ಡಾ. ಇಸ್ಮಾಯಿಲ್ ಸ-ರಾಝ್, ಪುತ್ತೂರು ಕಮ್ಯೂನಿಟಿ ಸೆಂಟರ್‌ನ ಇಮ್ತಿಯಾಜ್ ಪಾರ್ಲೆ, ಬಪ್ಪಳಿಗೆ ಮಸ್ಜೀನ್ನೊರ್ ಮಸೀದಿಯ ಮಾಜಿ ಅಧ್ಯಕ್ಷ ಬಿ.ಎಚ್.ಮುಹಮ್ಮದ್ ಹಾಜಿ, ಬಲ್ನಾಡು ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ನಾಟೆಕಲ್, ಬಪ್ಪಳಿಗೆ ಮಸ್ಜೀದನ್ನೂರು ಮಸೀದಿಯ ಕೋಶಾಽಕಾರಿ ಹಾಜಿ ಮೊಹಮ್ಮದ್ ಪಿ.ಕೆ, ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ನ ಪ್ರಧಾನ ಕಾರ್ಯದರ್ಶಿ ಶಮೀರ್ ಎಸ್.ಎಸ್.ಸ್ಕೇಲ್ ಬಝಾರ್, ಬಪ್ಪಳಿಗೆ ಮಸ್ಜಿದನ್ನೂರು ಮಸೀದಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಯು.ಕೆ, ಬಪ್ಪಳಿಗೆ ಎ.ಐ ವೈ ಎಸ್ ಅಧ್ಯಕ್ಷ ಮೂಸೆಕುಂಞಿ, (ಮೋನು ಬಪ್ಪಳಿಗೆ), ಗ್ರೂಪ್ ಡಿ ನೌಕರರ ಸಂಘದ ಉಪಾಧ್ಯಕ್ಷ ಪದ್ಮನಾಭ ಸಾಲಿಯಾನ್, ಗೋಡ್‌ಗಿಫ್ಟ್ ಅಬ್ದುಲ್ಲ ಹಾಜಿ ಉಪಸ್ಥಿತರಿದ್ದರು.

ಮೋನು ಬಪ್ಪಳಿಗೆ, ಸಾಹಿಕ್ ಬಪ್ಪಳಿಗೆ, ರಜಾಕ್ ಬಿ.ಎಚ್, ನೂರುದ್ದೀನ್ ಬಪ್ಪಳಿಗೆ, ರಫೀಕ್ ಬಪ್ಪಳಿಗೆ, ಹಂಝ ಬಿ.ಎಚ್, ರಮೀಝ್ ಬಪ್ಪಳಿಗೆ, ಅಬ್ದುಲ್ ರಹಿಮಾನ್ ಬಪ್ಪಳಿಗೆ ಮೊದಲಾದವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಗ್ರೀನ್ ವ್ಯೂವ್ ಶಾಲಾ ಶಿಕ್ಷಕಿ ಕತೀಜಾ, ಯಶೋದಾ, ಶೀಲಾ ಸಿ.ಎನ್, ಜಯಶೀಲ, ಜುಬೈದಾ ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಉಚಿತ ಮಧುಮೇಹ ತಪಾಸಣಾ ಶಿಬಿರ: ಕಾರ್ಯಕ್ರಮದ ಅಂಗವಾಗಿ ಡಾ| ನಝೀರ್ ಅಹಮ್ಮದ್‌ರವರ ಸಹಯೋಗದಲ್ಲಿ ಉಚಿತ ಮಧುಮೇಹ ಹಾಗೂ ರಕ್ತದ ಒತ್ತಡ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಈ ಶಿಬಿರದಲ್ಲಿ 70 ಮಂದಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here