ಪುತ್ತೂರು: ಸಾರ್ವಜನಿಕ ಗಣೇಶೋತ್ಸವ ಸಮಿತಿ ಕುಂಜಾರು ಇದರ ವತಿಯಿಂದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ನಡೆಯುವ 36ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದ ವಿಗ್ರಹ ರಚನೆಯ ಮುಹೂರ್ತವು ಜು.1ರಂದು ಪರ್ಲಡ್ಕ ಕಲಾವಿದ ತಾರಾನಾಥ ಆಚಾರ್ಯರವರ ಕುಟೀರದಲ್ಲಿ ನೆರವೇರಿತು.
ತಾರಾನಾಥ ಆಚಾರ್ಯರವರು ವಿಗ್ರಹ ಮುಹೂರ್ತ ನೆರವೇರಿಸಿದರು. ಗಣೇಶೋತ್ಸವದ ಸಮಿತಿ ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಜೋಯಿಷ ಯುರ್ಮುಂಜ, ಅಧ್ಯಕ್ಷ ಶ್ರೀಧರ ಪಂಜಿಗುಡ್ಡೆ, ಪ್ರಧಾನ ಕಾರ್ಯದರ್ಶಿ ರತನ್ ಕುಂಜಾರು, ಮಾಜಿ ಅಧ್ಯಕ್ಷ ಪೂವಪ್ಪ ದೇಂತಡ್ಕ, ಬನ್ನೂರು ಗ್ರಾ.ಪಂ ಸದಸ್ಯ ಗಿರಿಧರ ಪಂಜಿಗುಡ್ಡೆ, ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾನಾ ಸಮಿತಿ ಸದಸ್ಯ ಯಶೋಧರ ಕುಂಜಾರು, ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಜೇಶ್ ಬೇರಿಕೆ, ಶ್ಯಾಂಪ್ರಸಾದ್ ಪಂಜಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.