ಪುತ್ತೂರು: ಇಲ್ಲಿನ ಬಪ್ಪಳಿಗೆ ಶ್ರೀನಗರ ಸಮೀಪ ವಾಸವಿಲ್ಲದ ಹಳೆಯ ಹಂಚಿನ ಮನೆಯೊಂದು ಜು.6ರಂದು ಕುಸಿದು ಬಿದ್ದಿದೆ.
ಪುರಸಭಾ ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ಎಂಬರ ವಾಸವಿಲ್ಲದ ಹಳೆಯ ಮನೆಯು ಭಾರಿ ಮಳೆಗೆ ಕುಸಿದು ಕೆಳ ಮನೆಯ ಮೆಟ್ಟಿಲು ತನಕ ಬಿದ್ದಿದೆ. ಮನೆ ಇನ್ನಷ್ಟು ಕುಸಿದು ಬೀಳುವ ಸ್ಥಿತಿಯಲ್ಲಿದೆ. ಮನೆ ಕುಸಿದು ಬಿದ್ದರೆ ಕೆಳಗಿನ ಮನೆಗೆ ಹಾನಿಯುಂಟಾಗಲಿದ್ದು ಕೆಳಗಿನ ಮನೆಯವರು ಆತಂಕದಲ್ಲಿದ್ದಾರೆ.