ಪುತ್ತೂರು: ತೆಂಕಿಲ ವಿವೇಕ ನಗರದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶೇಷಾದ್ರಿಯಲ್ಲಿ ‘ಅನ್ನಪೂರ್ಣ’ ಯೋಜನೆಯ ನೂತನ ಪಾಕಶಾಲೆ ‘ಸಾನ್ನಿಧ್ಯ’ ಇದರ ಲೋಕಾರ್ಪಣೆ ಜು.7 ರಂದು ನಡೆಯಿತು.
ಗುಂಡ್ಯಡ್ಕದ ಪ್ರಗತಿಪರ ಕೃಷಿಕ ವಾಸು ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ದ್ವಾರಕ ಕನ್ ಸ್ಟ್ರಕ್ಷನ್ ನ ಮಾಲಕ ಗೋಪಾಲಕೃಷ್ಣ ಭಟ್ , ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಮಹಾವೀರ ಮೆಡಿಕಲ್ ಸೆಂಟರ್ ನ ಡಾ.ಅರ್ಚನಾ ನಾಯಕ್ , ಹಿರಿಯ ವಿದ್ಯಾರ್ಥಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕ ವಿಕಾಸ್ ಕಡಮ್ಮಣ್ಣಾಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ವಸಂತ , ಸಂಸ್ಥೆಯ ಅಧ್ಯಕ್ಷ ರಮೇಶ್ಚಂದ್ರ ನಾಯಕ್, ಸಂಚಾಲಕ ವಸಂತ ಸುವರ್ಣ , ಅನ್ನಪೂರ್ಣ ಸಮಿತಿ ಅಧ್ಯಕ್ಷ ಸುಹಾಸ್ ಮಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಆಶಾ ಮಾತಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಹಿರಿಯ ಸಾಹಿತಿ ಪ್ರೊ.ವಿ.ಬಿ ಅರ್ತಿಕಜೆ, ಅಚ್ಚುತ ನಾಯಕ್, ಅಶೋಕ್ ಕುಂಬ್ಳೆ, ರವೀಂದ್ರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.