ಸಿಇಟಿಯಲ್ಲಿ 1659 ನೇ ರ್‍ಯಾಂಕ್ ಗಳಿಸಿದ ವೇದಾಕ್ಷಗೆ ಪಡ್ನೂರು ಜನಾರ್ದನ ಯುವಕ ಮಂಡಲ, ಸರಸ್ವತಿ ಯುವತಿ ಮಂಡಲದಿಂದ ಸನ್ಮಾನ

0

ಪುತ್ತೂರು: 2023-24ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ 1659 ನೇ ರ್‍ಯಾಂಕ್ ಗಳಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಾಕ್ಷ ಇವರನ್ನು ಪಡ್ನೂರಿನ ಶ್ರೀ ಜನಾರ್ದನ ಯುವಕ ಮತ್ತು ಶ್ರೀ ಸರಸ್ವತಿ ಯುವತಿ ಮಂಡಲದ ಮಾಸಿಕ ಸಭೆಯಲ್ಲಿ ಸನ್ಮಾನಿಸಿ, ರೂ.5000 ನಗದು ನೀಡಿ ಗೌರವಿಸಲಾಯಿತು.
ಪಡ್ನೂರು ಮತಾವು ನಿವಾಸಿ ರಮೇಶ್ ಮತ್ತು ಬೇಬಿ ದಂಪತಿ ಪುತ್ರರಾಗಿರುವ ವೇದಾಕ್ಷ ದ್ವಿತೀಯ ಪಿಯುಸಿ. ವಿಜ್ಞಾನ ವಿಭಾಗ ಪರೀಕ್ಷೆಯಲ್ಲಿ 575 ಅಂಕಗಳನ್ನು ಗಳಿಸಿರುತ್ತಾರೆ. ಅಲ್ಲದೆ NEET ಪರೀಕ್ಷೆಯಲ್ಲೂ 522 ಅಂಕಗಳನ್ನು ಗಳಿಸಿರುತ್ತಾರೆ. ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಪೂವಪ್ಪ ದೇಂತಡ್ಕ, ಕಾರ್ಯದರ್ಶಿ ಶ್ರೀಧರ್ ಕುಂಜಾರು ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಗಿರಿಯಪ್ಪ ರೆಂಜಾಳ, ರಮೇಶ್ ರೆಂಜಾಳ, ಲಕ್ಷ್ಮಣ ದೆಂತಡ್ಕ, ಶ್ರೀಧರ ಪಂಜಿಗುಡ್ಡೆ, ರಾಜೇಶ್ ಬೇರಿಕೆ, ಯುವತಿ ಮಂಡಲದ ಅಧ್ಯಕ್ಷೆ ರೇವತಿ ಪಂಜಿಗುಡ್ಡೆ ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು. ರಾಜೇಶ್ ಆಟಿಕ್ಕು ಸನ್ಮಾನಿತರ ಪರಿಚಯ ಮಾಡಿದರು. ರಾಜೇಶ್ ಬೇರಿಕೆ ಸ್ವಾಗತಿಸಿ, ಜಗದೀಶ್ ಆಟಿಕ್ಕು ವಂದಿಸಿದರು. ಪೂವಪ್ಪ ದೆಂತಡ್ಕ ನಿರೂಪಿಸಿದರು.

LEAVE A REPLY

Please enter your comment!
Please enter your name here