ಬಂಟ್ವಾಳ ತಾಲೂಕಿನ ಹಲವೆಡೆ ಮಳೆ ಹಾನಿ

0

ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜು.6ರಂದು ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ ಸಂಭವಿಸಿದೆ. ಕೊಳ್ಳಾಡು ಗ್ರಾಮದ ತಾಮರಾಜೆ ಎಂಬಲ್ಲಿನ ಉಮಾವತಿ ಎಂಬವರ ಮನೆಗೋಡೆಗೆ ಕಂಪೌಂಡ್ ಕುಸಿದು ತೀವ್ರ ಹಾನಿಯಾಗಿರುತ್ತದೆ.


ಬಾಳ್ತಿಲ ಗ್ರಾಮದ ಕಲ್ಲಡ್ಕ ಎಂಬಲ್ಲಿ ವಸಂತ ಆಚಾರ್ಯರವರ ಮನೆಯ ಕಂಪೌಂಡ್ ಶ್ರೀರಾಮ ಶಾಲೆಯ ಆಟದ ಮೈದಾನದ ಆವರಣಕ್ಕೆ ಬಿದ್ದು ಹಾನಿಯಾಗಿದೆ. ನಾವೂರು ಗ್ರಾಮದ ಪೂಪಾಡಿಕಟ್ಟೆ ಎಂಬಲ್ಲಿ ಪಿಡಬ್ಲ್ಯುಡಿ ರಸ್ತೆ ಬದಿ ಧರೆ ಕುಸಿದಿದ್ದು ಲೋಕೋಪಯೋಗಿ ಇಲಾಖೆಯೊಂದಿಗೆ ಸ್ಥಳ ತನಿಖೆ ಮಾಡಿ ಅಪಾಯದ ಸ್ಥಿತಿಯಲ್ಲಿರುವ ಮನೆಗೆ ಸ್ಥಳಾಂತರದ ಬಗ್ಗೆ ತಿಳುವಳಿಕೆ ಪತ್ರ ನೀಡಲಾಯಿತು ಎಂದು ಕಂದಾಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಡಗಕಜೆಕಾರು ಗ್ರಾಮದ ಕೋಮಿನಡ್ಕ ಎಂಬಲ್ಲಿರುವ ಇಸುಬು ಬ್ಯಾರಿ ರವರ ಮನೆಗೆ ಆವರಣದ ಗೋಡೆ ಕುಸಿದು ಬಿದ್ದಿರುವುದರಿಂದ ಮನೆಗೆ ಹಾನಿಯಾಗಿದೆ.


ಕೊಳ್ನಾಡು ಗ್ರಾಮದ ಪಂಜರಕೋಡಿ ಎಂಬಲ್ಲಿ ಜೈನಾಭ ರವರ ಮನೆ ಪಕ್ಕದಲ್ಲಿನ ತಡೆಗೋಡೆ ಕುಸಿದು ಪಕ್ಕದ ಮನೆಯವರಾದ ಅಲಿಮ ರವರ ಮನೆ ಗೋಡೆ ಮೇಲೆ
ಬಿದ್ದು ಎರಡೂ ಮನೆಗಳು ತೀವ್ರ ಹಾನಿಯಾಗಿರುತ್ತದೆ ಎರಡೂ ಮನೆಯವರು ಪಕ್ಕದ ಸಂಬಂಧಿಕರ ಮನೆಗೆ ಸ್ಥಳಾಂತರವಾಗಿದ್ದಾರೆ.


ಪುದು ಗ್ರಾಮದ ಕಬೆಲ ಎಂಬಲ್ಲಿ ಶರ್ಮಿಳಾ ಎಂಬವರ ಮನೆ ಆವರಣ ಕುಸಿದುಬಿದ್ದಿದ್ದು, ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕರಿಯಂಗಳ ಗ್ರಾಮದ ಸಲಾಂ ಎಂಬವರ ಮನೆಯ ಹಿಂಬದಿಯ ಮಣ್ಣು ಕುಸಿದು ಮನೆಗೆ ಬಾಗಶ ಹಾನಿಯಾಗಿರುತ್ತದೆ. ಸಂಗಬೆಟ್ಟು ಗ್ರಾಮದ ಕುಮರೊಟ್ಟು ಎಂಬಲ್ಲಿ ದೇಜಪ್ಪ ಮೂಲ್ಯ ಅವರ ಮನೆಗೆ ತೀವ್ರ ಹಾನಿಯಾಗಿದೆ. ಮನೆಯವರನ್ನು ಹತ್ತಿರದ ಮನೆಗೆ ಸ್ಥಳಾಂತರಿಸಲಾಗಿದೆ.


ಬಾಳ್ತಿಲ ಗ್ರಾಮದ ನೀರಪಾದೆ ಎಂಬಲ್ಲಿ ಶೀನಪ್ಪ ಮೂಲ್ಯರವರ ಮನೆಗೆ ತೀವ್ರ ಹಾನಿಯಾಗಿರುತ್ತದೆ ಅವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಗೊಳಿಸಲಾಗಿದೆ. ಅರಳ ಗ್ರಾಮದ ಹಸನಬ್ಬ ಮನೆಯ ತಡೆಗೋಡೆ ಕುಸಿದುಬಿದ್ದಿದೆ. ಬಾಳ್ತಿಲ ಗ್ರಾಮದ ಬೆರ್ಕಳ ಎಂಬಲ್ಲಿ ಧರ್ಣಪ್ಪ ಪೂಜಾರಿ ಅವರ ಮನೆ ಬದಿಯ ಬರೆ ಜರಿದಿರುತ್ತದೆ. ವಿಟ್ಲ ಕಸಬಾ ಗ್ರಾಮದ ನೆಕ್ಕರೆ ಎಂಬಲ್ಲಿ ಮನೆಯ ಕಂಪೌಂಡ್ ಒಂದು ಕುಸಿದು ಬಿದ್ದಿದೆ. ಅರಳ ಗ್ರಾಮದ ಬೇಬಿ ರವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಪಾಣೆಮಂಗಳೂರು ಸಮೀಪದ ಬೋಳಂಗಡಿಯಲ್ಲಿ ಮನೆ ನೆಲಕಚ್ಚುವ ಆತಂಕದಲ್ಲಿ ಮನೆಯವರಿದ್ದಾರೆ. ಬೋಳಂಗಡಿಯ ನಿವಾಸಿ ಇಬ್ರಾಹೀಂ ಎಂಬವರಿಗೆ ಸೇರಿದ ಮನೆಯ ಮುಂಭಾಗದಲ್ಲಿ ಕುಸಿತವಾಗಿದೆ. ಇದರಿಂದಾಗಿ ಸುಮಾರು ನಾಲೈದು ಮನೆಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ.

LEAVE A REPLY

Please enter your comment!
Please enter your name here