ಪುತ್ತೂರು: ಭಾರಿ ಮಳೆಗೆ ನಗರಸಭೆ ವ್ಯಾಪ್ತಿಯ ಬಪ್ಪಳಿಗೆಯಲ್ಲಿ ಮನೆಯೊಂದರ ಪಕ್ಕದಲ್ಲೇ ಇರುವ ಬಾವಿಯೊಂದು ಕುಸಿದ ಘಟನೆ ಜು.ರಂದು ನಡೆದಿದೆ. ಬಾವಿ ಕುಸಿದು ಪಕ್ಕದಲ್ಲಿನ ಮನೆ ಅಪಾಯದ ಅಂಚಿನಲ್ಲಿದ್ದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದವರು ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ಬಪ್ಪಳಿಗೆ ನಿವಾಸಿ ಸುಶೀಲ ಎಂಬವರ ಮನೆ ಪಕ್ಕದ ಬಾವಿ ಕುಸಿದು ಅವರ ಮನೆ ಅಪಾಯದಲ್ಲಿರುವ ವಿಚಾರ ತಿಳಿದು ತಕ್ಷಣ ಆಗಮಿಸಿದ ಅಗ್ನಿಶಾಮಕದಳದವರು ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಿ ಮನೆ ಸುತ್ತಲೂ ತಾತ್ಕಾಲಿಕ ತಡೆ ಬೇಲಿ ನಿರ್ಮಿಸಿದ್ದಾರೆ. ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್ ಅವರು ಭೇಟಿ ನೀಡಿದ್ದಾರೆ. ಅಗ್ನಶಾಮಕದಳದ ಠಾಣಾಧಿಕಾರಿ ವಿ ಸುಂದರ್, ಪ್ರಮುಖ ಅಗ್ನಿಶಾಮಕ ರುಕ್ಮಯ ಗೌಡ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.