ಬೆಟ್ಟಂಪಾಡಿ ಕಾಲೇಜಿನಲ್ಲಿ ಆರೋಗ್ಯ ತಪಾಸಣಾ ಶಿಬಿರ – ಆರೋಗ್ಯಕರ ಜೀವನ ಶೈಲಿಗೆ ಜಾಗೃತ ಮನೋಭಾವ ಅವಶ್ಯಕ: ಡಾ.ಸುಲೇಖಾ ವರದರಾಜ

0

ಬೆಟ್ಟಂಪಾಡಿ: ರೋಗ ಬರುವುದಕ್ಕಿಂತ ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಆರೋಗ್ಯಕರ ಜೀವನ ಶೈಲಿಗೆ ಜಾಗೃತ ಮನೋಭಾವ ಅವಶ್ಯಕ ಎಂದು ಪ್ರಸಿದ್ಧ ಮಕ್ಕಳ ತಜ್ಞರು ಮತ್ತು ಮನೋಚಿಕಿತ್ಸಕರೂ ಆದ ಡಾ.ಸುಲೇಖಾ ವರದರಾಜ ಹೇಳಿದರು. ಇವರು ಇತ್ತೀಚೆಗೆ
ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಏರ್ಪಡಿಸಿದ ‘ಆರೋಗ್ಯ ತಪಾಸಣಾ ಶಿಬಿರ’ ವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ 300ಕ್ಕೂ ಹೆಚ್ಚು ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಣ್ಣಿನ ಸಮಸ್ಯೆ ತಪಾಸಣೆ, ರಕ್ತದೊತ್ತಡ ತಪಾಸಣೆ ಹಾಗೂ ಇತರೆ ತಪಾಸಣೆಯನ್ನು ಮಾಡುವುದರ ಮೂಲಕ ವೈದ್ಯರು ಹಲವು ಚಿಕಿತ್ಸೆಗಳನ್ನು ಶಿಫಾರಸ್ಸು ಮಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಇವರ ಮಾರ್ಗದರ್ಶನದಂತೆ ನಡೆದ ಕಾರ್ಯಕ್ರಮವನ್ನು ಎನ್ಎಸ್ಎಸ್ ಅಧಿಕಾರಿ ಹರಿಪ್ರಸಾದ್ ಎಸ್ ಸಂಘಟಿಸಿದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾ. ಕಾಂತೇಶ್ ಎಸ್ ಹಾಗೂ ಉಪನ್ಯಾಸಕ ವೃಂದದವರು ಹಾಜರಿದ್ದರು. ಕಾರ್ಯಕ್ರಮವನ್ನು ಘಟಕ ನಾಯಕಿ ಅನನ್ಯ ಎಸ್ ನಿರ್ವಹಿಸಿದರು.

LEAVE A REPLY

Please enter your comment!
Please enter your name here