





ಉಪ್ಪಿನಂಗಡಿ: ಭಾರೀ ಮಳೆಗೆ ಮನೆಯ ಅಂಗಳವು ಕುಸಿದು ಹೋದ ಘಟನೆ ಉಪ್ಪಿನಂಗಡಿ ಗ್ರಾಮದ ನಲಿಕೆಮಜಲು ಎಂಬಲ್ಲಿ ಜು.7ರ ಸಂಜೆ ನಡೆದಿದ್ದು, ಅಂಗಳವೇ ಕುಸಿದು ಹೋಗಿದ್ದರಿಂದ ಮನೆಯು ಅಪಾಯದ ಸ್ಥಿತಿಯಲ್ಲಿದೆ.


ಇಲ್ಲಿನ ನಲಿಕೆಮಜಲು ನಿವಾಸಿ ಗೋಪಿ ಎಂಬವರ ಮನೆಯ ಮುಂಭಾಗದಲ್ಲಿ ಭಾರೀ ಮಳೆಗೆ ತಡೆಗೋಡೆ ಸಹಿತ ಅಂಗಳವು ಕುಸಿತ ಕಂಡಿದೆ. ಇದರಿಂದ ಮನೆಯು ಕುಸಿತಕ್ಕೊಳಗಾಗುವ ಭೀತಿಯಿದ್ದು, ಸ್ಥಳಕ್ಕೆ ಉಪ್ಪಿನಂಗಡಿ ಗ್ರಾಮ ಸಹಾಯಕ ಯತೀಶ್ ಮಡಿವಾಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.













