ಉಪ್ಪಿನಂಗಡಿ: ದ್ವಿಚಕ್ರ ವಾಹನ ಪಲ್ಟಿ- ಸವಾರನಿಗೆ ಗಾಯ

0

ಉಪ್ಪಿನಂಗಡಿ: ದ್ವಿಚಕ್ರ ವಾಹನವೊಂದು ಪಲ್ಟಿಯಾಗಿ ಸವಾರ ಗಾಯಗೊಂಡ ಘಟನೆ ಉಪ್ಪಿನಂಗಡಿ ಗ್ರಾಮದ ನೆಡ್ಚಿಲ್ ಬಳಿ ಜು.8ರಂದು ನಡೆದಿದೆ.
ಬಜತ್ತೂರು ಗ್ರಾಮದ ಪುಯಿಲ ನಿವಾಸಿ ಪ್ರವೀಣ್ ಪಿಂಟೋ (39) ಗಾಯಗೊಂಡ ದ್ವಿಚಕ್ರ ವಾಹನ ಸವಾರ. ಉಪ್ಪಿನಂಗಡಿ ಕಡೆಯಿಂದ ಪೆರಿಯಡ್ಕ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನ ಪಲ್ಟಿಯಾಗಿದ್ದು, ಘಟನೆಯಿಂದ ದ್ವಿಚಕ್ರ ಸವಾರನ ತಲೆಗೆ ಏಟು ಬಿದ್ದಿದೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೆರಿಯಡ್ಕದ ಅಮ್ಮ ಹೊಟೇಲ್‌ನ ಧರ್ನಪ್ಪ ಪೂಜಾರಿ ದಂಪತಿ ಕಾರ್ಯನಿಮಿತ್ತ ಉಪ್ಪಿನಂಗಡಿಗೆ ತೆರಳುತ್ತಿದ್ದ ಸಂದರ್ಭ ಈ ಅಪಘಾತ ನಡೆದಿದ್ದು, ರಸ್ತೆಯಲ್ಲಿ ಬಿದ್ದಿದ್ದ ದ್ವಿಚಕ್ರ ವಾಹನ ಸವಾರನನ್ನು ತಕ್ಷಣವೇ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here