ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಪ್ರಯುಕ್ತ ’ಕೆಸರ್‌ದ ಕಂಡೊಡೊಂಜಿ ದಿನ’ ಕಾರ್ಯಕ್ರಮ

0

ಮಣ್ಣಿನ ಗುಣದಲ್ಲಿ ಆರೋಗ್ಯ ರಕ್ಷಣೆ ಸಾಧ್ಯ: ಒಡಿಯೂರು ಶ್ರೀ

ವಿಟ್ಲ: ನಮ್ಮ‌ ತನ‌ವನ್ನು ಮರೆತಾಗ ಆಪತ್ತು‌ಹೆಚ್ಚು ಮಣ್ಣಿನ ಗುಣದಲ್ಲಿ ಆರೋಗ್ಯ ರಕ್ಷಣೆ ಸಾಧ್ಯ. ಸಂಭ್ರಮದ ಕ್ಷಣವಿದು. ಪ್ರಕೃತಿ ವೈಪರಿತ್ಯದಿಂದಾಗಿ ಹಲವಾರು ಸಮಸ್ಯೆ ಎದುರಾಗುತ್ತದೆ. ತುಳುನಾಡಿನ ಮಣ್ಣಿನ ವಿಶೇಷತೆ ಹಲವಿದೆ. ಆತ್ಮ ಒಪ್ಪುವ  ಸಂಭ್ರಮದ ಕ್ಷಣ ಇದಾಗಬೇಕು. ಕಾಡು ಮರೆಯಾಗಿ ನಾಡಾಗುತ್ತಿದೆ. ಮರ ಬೆಳೆಸಿ ಕಾಡು ಉಳಿಸುವ ಕೆಲಸವಾಗಬೇಕು. ನೀರಿನ ಮೂಲ ಬತ್ತಿಹೋಗುತ್ತಿದೆ. ನೀರಿಗೆ ಇನ್ನೊಂದು ಹೆಸರು ಪ್ರಾಣ. ಇಂತಹ ಕ್ರೀಡೆಗಳಿಂದ ಸಾಮರಸ್ಯ ಬೆಳೆಯುವ ಕೆಲಸವಾಗಬೇಕು. ಇತರರಿಗೆ ಆದರ್ಶವಾಗುವ ರೀತಿಯಲ್ಲಿ ಕಾರ್ಯಕ್ರಮ ನಡೆಯಲಿ ಎಂದು  ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಜು.9ರಂದು ಒಡಿಯೂರು ಶ್ರೀ ಸಂಸ್ಥಾನದ ಸಾಗುವಳಿ ಭೂಮಿ ಬನಾರಿಯಲ್ಲಿ ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ವತಿಯಿಂದ ಜನ್ಮದಿನೋತ್ಸವ – ಗ್ರಾಮೋತ್ಸವದ ಅಂಗವಾಗಿ ನಡೆದ ಕೆಸರ್ ದ ಕಂಡೊಡೊಂಜಿ ದಿನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಮಿತಿಯ ಕಾರ್ಯಾಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿರವರು ಮಾತನಾಡಿ ಶ್ರೀಗಳ ಜನ್ಮದಿನೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳೆಲ್ಲವೂ ಜನೋಪಯೋಗಿಯಾಗಿದೆ.  ನಾವು ಆಟದೊಂದೊಂದಿಗೆ ಜೀವನ ಮೌಲ್ಯವನ್ನು ಹೆಚ್ಚಿಸೋಣ.  ಹಿಂದಿನ ಜೀವನದ ಆದರ್ಶವನ್ನು‌ ನಾವು‌ ತಿಳಿದುಕೊಳ್ಳೋಣ ಎಂದರು.

ಸಾಧ್ವಿ  ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ, ನಿರ್ದೇಶಕ ಲೋಕನಾಥ ಶೆಟ್ಟಿ ತಾಳಿಪ್ಪಾಡಿಗುತ್ತು, ಒಡಿಯೂರು ಗುರುದೇವ ಸೇವಾಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಯೋಜನಾಧಿಕಾರಿ ಕಿರಣ್ ಉರ್ವ, ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಕನ್ಯಾನ ಗ್ರಾಮ ಸಮಿತಿ ಅಧ್ಯಕ್ಷ ಕೆ. ಪಿ. ರಘುರಾಮ ಶೆಟ್ಟಿ, ರೇಣುಕಾ ಎಸ್. ರೈ, ಕ್ರೀಡಾಕೂಟದ ಸಂಚಾಲಕ ಮಾತೇಶ್ ಭಂಡಾರಿ ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ಚಂದ್ರಹಾಸ ಶೆಟ್ಟಿ, ರವೀಂದ್ರ ಅಳಿಕೆ, ಶಶಿಧರ ಶೆಟ್ಟಿ ಜಮ್ಮದಮನೆ, ಬಿಂದುಶ್ರೀ, ಪ್ರವೀಣ್ ಅವರು ಸಹಕರಿಸಿದರು. ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿದರು. ಸದಾಶಿವ ಶೆಟ್ಟಿ ವಂದಿಸಿದರು. ದೇವಿಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here