ರೋಟರಿ ಕ್ಲಬ್ ಪುತ್ತೂರು -ಯುವ ಅಧ್ಯಕ್ಷ:ಪಶುಪತಿ ಶರ್ಮ,ಕಾರ್ಯದರ್ಶಿ:ಡಾ.ದೀಪಕ್ ಕೆ.ಬಿ,ಕೋಶಾಧಿಕಾರಿ:ಕುಸುಮ್ ರಾಜ್

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಯುವ ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಪಶುಪತಿ ಶರ್ಮ, ಕಾರ್ಯದರ್ಶಿಯಾಗಿ ಡಾ.ದೀಪಕ್ ಕೆ.ಬಿ, ಕೋಶಾಧಿಕಾರಿಯಾಗಿ ಕುಸುಮ್ ರಾಜ್ ರವರು ಅಧಿಕಾರ ಸ್ವೀಕರಿಸಲಿರುವರು.


ಉಳಿದಂತೆ ಜೊತೆ ಕಾರ್ಯದರ್ಶಿಯಾಗಿ ವಿನೀತ್ ಶೆಣೈ, ನಿಯೋಜಿತ ಅಧ್ಯಕ್ಷ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಅಶ್ವಿನಿಕೃಷ್ಣ ಮುಳಿಯ, ಬುಲೆಟಿನ್ ಎಡಿಟರ್ ಆಗಿ ಶರತ್ ಎಸ್,ಸಾರ್ಜಂಟ್ ಎಟ್ ಆಮ್ಸ್೯ ಆಗಿ ಸುದರ್ಶನ್ ರೈ,ನಿಕಟಪೂರ್ವ ಅಧ್ಯಕ್ಷರಾಗಿ ರಾಜೇಶ್ವರಿ ಆಚಾರ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಅಭಿಶ್ ಕೆ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ನಿಹಾಲ್ ಶೆಟ್ಟಿ,
ಇಂಟರ್ ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ನಿರೀಕ್ಷಿತ್ ರೈ, ಯೂತ್ ಸರ್ವಿಸ್ ನಿರ್ದೇಶಕರಾಗಿ ಧೀರಜ್ ಶೆಟ್ಟಿ, ಚೇರ್ ಮ್ಯಾನ್ ಗಳಾಗಿ ಪ್ರಕಾಶ್ ರೈ(ಪಲ್ಸ್ ಪೋಲಿಯೊ), ದೀಕ್ಷಾ ಸಹಜ್‌ ರೈ (ವೆಬ್), ವಿಶಾಲ್ ಮೊಂತೆರೋ(ಸೋಶಿಯಲ್ ಮೀಡಿಯಾ/ಪಬ್ಲಿಕ್ ಇಮೇಜ್), ಅನಿಲ ಡಿ.ಶೆಟ್ಟಿ(ಟೀಚ್), ಕಾರ್ತಿಕ್ ಪೆರ್ವೋಡಿ(ವಿನ್ಸ್) ಡಾ.ಯದುರಾಜ್(ರೋಟರಿ ಫೌಂಡೇಶನ್-ಟಿ.ಆರ್.ಎಫ್), ಎಲ್ಯಾಸ್ ಪಿಂಟೋ(ಕ್ರೀಡೆ), ಸಚಿನ್ ನಾಯಕ್(ಸಾಂಸ್ಕೃತಿಕ), ಶಿವಪ್ರಸಾದ್(ಸಿ.ಎಲ್.ಸಿ.ಸಿ), ಸತೀಶ್ ರೈ ಕೆ(ಮೆಂಬರ್ ಶಿಪ್ ಡೆವಲಪ್ಮೆಂಟ್), ಹರಿಪ್ರಸಾದ್ ಶೆಟ್ಟಿ(ಜಿಲ್ಲಾ ಪ್ರಾಜೆಕ್ಟ್)ರವರು ಅಧಿಕಾರ ಸ್ವೀಕರಿಸಲಿದ್ದಾರೆ.


ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಶುಪತಿ ಶರ್ಮರವರು ಕುಳಮರ್ವ ವೆಂಕಟರಮಣ ಮತ್ತು ರತ್ನಾವತಿಯವರ ಪುತ್ರರಾಗಿದ್ದು ದರ್ಬೆ ಫಿಲೋಮಿನಾ ಕಾಲೇಜು ಎದುರು ಪಶುಪತಿ ಲೈಟ್ಸ್ ಮತ್ತು ಇಲೆಕ್ಟ್ರಿಕಲ್ ನ ಮಾಲಕರಾಗಿರುತ್ತಾರೆ ಅಲ್ಲದೆ ರೋಟರಿ ಕ್ಲಬ್ ಪುತ್ತೂರು ಯುವದ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಜೇಸಿಐ ಪುತ್ತೂರಿನ ಪೂರ್ವಾಧ್ಯಕ್ಷರಾಗಿ ರಾಷ್ಟ್ರೀಯ ಮಟ್ಟದಲ್ಲಿ ಸೇವೆಗೈದಿರುತ್ತಾರೆ.
ಅಂತರರಾಷ್ಟ್ರೀಯ ಮಟ್ಟದ ಬೈಕ್ ರೈಡ್ ಫಾರ್ ರೋಟರಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು ಪ್ರತಿ ವರ್ಷ ಗವರ್ನರ್ ಗಳ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಪಶುಪತಿ ಶರ್ಮರವರು ಪತ್ನಿ ಅನ್ನಪೂರ್ಣ ಶರ್ಮರವರೊಂದಿಗೆ ಫಿಲೋಮಿನಾ ಕಾಲೇಜು ಬಳಿ ವಾಸ್ತವ್ಯ ಹೊಂದಿದ್ದಾರೆ.


ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಡಾ|ದೀಪಕ್ ಕೆ.ಬಿ.ರವರು ಕತ್ಲಡ್ಕ ಬಾಲಕೃಷ್ಣ ಗೌಡ ಹಾಗೂ ರುಕ್ಮಿಣಿ ದಂಪತಿ ಪುತ್ರರಾಗಿದ್ದು, ಡಿಪ್ಲೋಮ, ಬಿಇ ಮತ್ತು ಎಂ.ಟೆಕ್ ಪದವಿಯನ್ನು ಮೆಕ್ಯಾನಿಕಲ್ ವಿಭಾಗದಲ್ಲಿ ಪಡೆದಿರುತ್ತಾರೆ. ಬಳಿಕ ಪಿ.ಎಚ್.ಡಿ ಪದವಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಲ್ಲಿ ಪಡೆದಿರುತ್ತಾರೆ. ಕಳೆದ 17 ವರ್ಷಗಳಿಂದ ವಿವೇಕಾನಂದ ಇಂಜಿನಿಯರಿಂಗ್ ಸಹಾಯಕ ಪ್ರಾಧ್ಯಾಪಕ, ಪ್ರಸ್ತುತ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಪತ್ನಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರಭಾ ಜಿ.ಎಸ್, ಮಕ್ಕಳಾದ ಚಿರಾಗಿ
ಡಿ.ಗೌಡ, ರಿತನ್ಯ ಡಿ.ಗೌಡರವರೊಂದಿಗೆ ನೆಹರುನಗರದಲ್ಲಿ ವಾಸ್ತವ್ಯ ಹೊಂದಿದ್ದಾರೆ.


ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಕುಸುಮ್ ರಾಜ್ ರವರು ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಗೋಳ್ತಿಲ ಮನೆತನದ ಕೊರಗಪ್ಪ ಗೌಡ ಗೋಳ್ತಿಲ ಹಾಗೂ ಚಿನ್ನಮ್ಮ ದಂಪತಿ ಪುತ್ರನಾಗಿದ್ದು, ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಗುತ್ತಿಗಾರು ಶಾಲೆಯಲ್ಲಿ, ಪದವಿಯನ್ನು ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪೂರೈಸಿದ್ದರು. ಬಳಿಕ ಬೆಂಗಳೂರು ಜಗದಾಳೆ ಅಮೃತ್ ಗ್ರೂಪ್ ಆಫ್ ಇಂಡಿಯಾ ಇದರಲ್ಲಿ ಏರಿಯಾ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಅಲ್ಲದೆ ಕಳೆದ 10ವರ್ಷಗಳಿಂದ ಬೆಂಗಳೂರು, ಪುತ್ತೂರು, ನಲ್ಲಿ ಲಹರಿ ಡ್ರೈ ಫ್ರುಟ್ಸ್ ಎಂಬ ಸಂಸ್ಥೆಯನ್ನು ಮುನ್ನೆಡೆಸಿಕೊಂಡು ಬಂದಿರುತ್ತಾರೆ. ದ.ಕ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪೆನಿಯ ಸ್ಥಾಪಕರೂ ಕುಸುಮ್ ರಾಜ್ ರವರು ಆಗಿರುತ್ತಾರೆ. 2015ರಲ್ಲಿ ರೋಟರಿ ಯುವ ಕ್ಲಬ್ ಗೆ ಸೇರ್ಪಡೆಗೊಂಡು ಅಲ್ಲಿ ಕಾರ್ಯದರ್ಶಿ, ನಿರ್ದೇಶಕ, ಕೋಶಾಧಿಕಾರಿಯಾಗಿ, ಜೇಸಿಐನಲ್ಲಿ ಕಾರ್ಯದರ್ಶಿ ಹೀಗೆ ವಿವಿಧ ಹುದ್ದೆಗಳನ್ನು ನಿಭಾಯಿಸಿರುತ್ತಾರೆ. ಕುಸುಮ್ ರಾಜ್ ರವರಿಗೆ ಜೇಸಿಐ ಸಾಧನಾಶ್ರೀ ಪ್ರಶಸ್ತಿ, ರೋಟರಿಯಲ್ಲಿ ಯಶಸ್ವಿ ಉದ್ಯಮಿ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಪ್ರಸ್ತುತ ಕುಸುಮ್ ರಾಜ್ ರವರು ಪತ್ನಿ ಲಿಖಿತಾ ಕುಸುಮ್, ಮಕ್ಕಳಾದ ಗಹನ್, ಅಹನ್ ರವರೊಂದಿಗೆ ಬಲ್ನಾಡಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.


ಜು.12 ರಂದು ಪದಪ್ರದಾನ..
ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಜು.12 ರಂದು ಪುತ್ತೂರಿನ ರೋಟರಿ ಮನೀಷಾ ಸಭಾಂಗಣದಲ್ಲಿ ಸಂಜೆ ಜರಗಲಿದೆ. ಪದಪ್ರದಾನ ಅಧಿಕಾರಿಯಾಗಿ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3182 ಇದರ ಪಿಡಿಜಿ ಅಭಿನಂದನ್ ಶೆಟ್ಟಿರವರು ಪದಪ್ರದಾನವನ್ನು ನೆರವೇರಿಸಲಿದ್ದಾರೆ. ರೋಟರಿ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ವಲಯ ಸೇನಾನಿ ಝೇವಿಯರ್ ಡಿ’ಸೋಜ, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈಯವರು ಈ ಸಂದರ್ಭದಲ್ಲಿ ಉಪಸ್ಥಿತಲಿರುವರು ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here