ಜೈನ ಮುನಿ ಕೊಲೆ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು, ಮಠ ಮಂದಿರಗಳಿಗೆ ಸೂಕ್ತ ಭದ್ರತೆ ಒದಗಿಸಲು ಸರಕಾರಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹ

0


ಪುತ್ತೂರು: ಬೆಳಗಾವಿಯ ಚಿಕ್ಕೋಡಿ ಹಿರೇಕೋಡಿಯ ಜೈನಮುನಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಮುಂದಿನ ದಿನ ಮಠ ಮಂದಿರಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.
ಜು.5ರಿಂದ ಹಿರೇಕೋಡಿಯ ನಂದಿಪರ್ವತ ಆಶ್ರಮದಿಂದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗಿದ್ದರು. ಆದರೆ ಅವರು ಕೊಲೆಗೀಡಾಗಿದ್ದು, ಅವರ ಮೃತ ದೇಹವನ್ನು ಬೋರ್‌ವೆಲ್‌ನಲ್ಲಿ ಹಾಕುವ ಮೂಲಕ ಕೊಲೆಗಡುಕರು ಅಮಾನುಷ ಕೃತ್ಯ ಎಸಗಲಾಗಿದ್ದಾರೆ. ಇದು ಮಠ ಮಂದಿರಗಳಲ್ಲಿ ಪೂಜೆ, ಅಹಿಂಸೆಯನ್ನು ಬೋಧಿಸುವ ಸ್ವಾಮೀಜಿಗಳಿಗೂ ಭದ್ರತೆ ಇಲ್ಲವೆಂಬ ಆತಂಕ ಇವತ್ತು ಕರ್ನಾಟಕದಲ್ಲಿ ಎದುರಾಗಿದೆ. ಜೈನ ಮುನಿಗಳ ಈ ಕೊಲೆಯಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಮುಂದಿನ ದಿನ ಮಠ ಮಂದಿರಗಳಿಗೂ ಕನಾಟಕ ಸರಕಾರದ ಸೂಕ್ತ ಭದ್ರತೆ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮತ್ತು ಗೃಹಸಚಿವರಿಗೆ ಮನವಿ ಮಾಡುತ್ತೇನೆ ಎಂದು ಸಂಜೀವ ಮಠಂದೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here