ಮಜ್ಜಾರಡ್ಜ ಶ್ರೀ ವಿಷ್ಣು ಯುವಶಕ್ತಿ ಬಳಗದ 6 ನೇ ವರ್ಷದ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

0

ಗೌರವ ಅಧ್ಯಕ್ಷ: ಓಲೆಮುಂಡೋವು ಮೋಹನ್ ರೈ, ಅಧ್ಯಕ್ಷ : ರಘುನಾಥ್ ಗೋಳ್ತಿಲ, ಪ್ರ.ಕಾರ್ಯದರ್ಶಿ: ಭರತ್, ಸಂಘಟನಾ ಕಾರ್ಯದರ್ಶಿ: ರಾಜೇಶ್ ಮಯೂರ

ಪುತ್ತೂರು: ತಾಲೂಕು ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗ ಇದರ 6 ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮಜ್ಜಾರಡ್ಕದ ಶ್ರೀ ವಿಷ್ಣು ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಿತು.

ಸಂಘಟನೆಯ ಗೌರವ ಸಲಹೆಗರಾರ ಲೋಕೇಶ್ ರೈ ಅಮೈಯವರು ಆಯ್ಕೆ ಪಕ್ರಿಯೆ ನಡೆಸಿಕೊಟ್ಟು, ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಅಭಿನವ್ ಫ್ರೆಂಡ್ಸ್ ಮಾಡಾವು ಇದರ ಪ್ರಮುಖ ಮನೋಜ್ ರೈ ಮಾಡಾವು ಮಾತನಾಡಿ, ಸಂಘಟನೆಯು ಈಗಾಗಲೇ ತಾಲೂಕು, ಜಿಲ್ಲಾ ಮಟ್ಟದಲ್ಲಿ ಉತ್ತಮ ಸಂಘಟನೆ ಎಂದು ಗುರುತಿಸಿ ಕೊಂಡಿದ್ದು, ಇನ್ನು ರಾಜ್ಯ ಮಟ್ಟದಲ್ಲಿ ಉತ್ತಮ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿ ಎಂದು ಹೇಳಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ತಾಲೂಕು ನಲಿಕೆ ಸಮಾಜ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ರವಿ ಅಜಿಲ ಸ್ವಾಮಿನಗರ ಶುಭಹಾರೈಸಿದರು.

ಸಂಘಟನೆಯ ನಿರ್ಗಮಿತ ಅಧ್ಯಕ್ಷ ಉದಯ ಸ್ವಾಮಿನಗರರವರು ಮಾತನಾಡಿ, ತನ್ನ ಅವಧಿಯಲ್ಲಿ ತಾಲೂಕು ಹಾಗೂ ಜಿಲ್ಲಾ ಪ್ರಶಸ್ತಿ ಬರಲು ಶ್ರಮವಹಿಸಿದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸರ್ವ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಸಂಘಟನೆಯ ಸಂಘಟಕ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ ಮಯೂರ ಉಪಸ್ಥಿತರಿದ್ದರು. ಹರೀಶ್ ಸ್ವಾಮಿನಗರ ಸ್ವಾಗತಿಸಿ, ರಾಜೇಶ್ ಕೆ ಮಯೂರ ವಂದಿಸಿದರು. ಭರತ್ ಒಲ್ತಾಜೆ ಕಾರ್ಯಕ್ರಮ ನಿರೂಪಿಸಿದರು.


ಪದಾಧಿಕಾರಿಗಳ ಆಯ್ಕೆ
ಸಂಘಟನೆಯ ಗೌರವ ಅಧ್ಯಕ್ಷರಾಗಿ ಒಲೆಮುಂಡೋವು ಮೋಹನ್ ರೈ, ಅಧ್ಯಕ್ಷರಾಗಿ ರಘುನಾಥ್ ಗೋಲ್ತಿಲ,ಉಪಾಧ್ಯಕ್ಷರಾಗಿ ಯತೀಶ್ ಕೋಡಿಯಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಭರತ್ ಒಲ್ತಾಜೆ, ಜೊತೆ ಕಾರ್ಯದರ್ಶಿಯಾಗಿ ಲೋಕೇಶ್ ಸ್ವಾಮಿನಗರ, ಕೋಶಾಧಿಕಾರಿಯಾಗಿ ಗುರುಪ್ರಸಾದ್ ಮಜ್ಜಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹರೀಶ್ ಸ್ವಾಮಿನಗರ, ಜೊತೆ ಕಾರ್ಯದರ್ಶಿ ಯಾಗಿ ಪುರುಷೋತ್ತಮ್ ಗೋಲ್ತಿಲ, ಕ್ರೀಡಾ ಕಾರ್ಯದರ್ಶಿಯಾಗಿ ತಿರುಮಲ ಕುಂಬ್ರ, ಜೊತೆ ಕಾರ್ಯದರ್ಶಿಯಾಗಿ ಪ್ರಸಾದ್ ಬಿರ್ವ ಕಾವು, ಗೌರವ ಸಲಹೆಗಾರರಾಗಿ ಕಿಶೋರ್ ಶೆಟ್ಟಿ ಅರಿಯಡ್ಕ, ಲೋಕೇಶ್ ರೈ ಅಮೈ, ಮೋಹನ್ ದಾಸ್ ರೈ ಕುಂಬ್ರ, ನಾರಾಯಣ ಪೂಜಾರಿ ಮಡ್ಯಾ೦ಗಳ, ಮನೋಜ್ ರೈ ಮಾಡಾವು, ರವಿವರ್ಮ ಕಾರ್ಕಳ, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಕೆ ಮಯೂರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ಮಜ್ಜಾರಡ್ಕ ಘಟಕದ ಸದಸ್ಯರೊಂದಿಗೆ ವೇದಿಕೆಯ ಸುತ್ತಮುತ್ತ ಸ್ವಚ್ಛತೆಯ ಕಾರ್ಯ ನಡೆಯಿತು.

LEAVE A REPLY

Please enter your comment!
Please enter your name here