ಬೆದ್ರಾಳ: ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬೋರ್ಡ್ ಅಳವಡಿಕೆ..!

0


ಪುತ್ತೂರು: ಗೋಣಿ ಚೀಲವೊಂದರಲ್ಲಿ ಖಾಲಿ ಬಿಯರ್ ಬಾಟಲಿ ಮತ್ತು ಕಸ ತುಂಬಿಸಿ ಅದನ್ನು ಬೆದ್ರಾಳ ಹೌಸ್ ರಸ್ತೆಯಲ್ಲಿ ಕಿಡಿಗೇಡಿಗಳು ಎಸೆದು ಹೋಗಿದ್ದು ಇದೀಗ ಅದೇ ಗೋಣಿ ಚೀಲ ಪಕ್ಕದಲ್ಲಿ ಶ್ರದ್ದಾಂಜಲಿ’ ಅರ್ಪಿಸಿರುವ ಬರಹ ಕಂಡು ಬಂದಿದೆ. ಪರಿಸರದಲ್ಲಿ ಬಾಟಲಿ ಮತ್ತು ಕಸ ತುಂಬಿದ ಗೋಣಿ ಚೀಲವನ್ನು ಎಸೆದು ಹೋಗಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಎಸೆದು ಹೋದ ಸ್ಥಳದಲ್ಲಿಸತ್ತವರಿಗೆ ಶ್ರದ್ಧಾಂಜಲಿ’ ಎಂದು ಬರೆದು ಅಳವಡಿಸಿದ್ದಾರೆ.

ಶ್ರದ್ಧಾಂಜಲಿ ಅರ್ಪಿಸಿರುವುದು ಹಾಸ್ಯದ ರೂಪದಲ್ಲಿ ಕಂಡು ಬಂದರೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಈ ಪರಿಸರದಲ್ಲಿ ಈ ಹಿಂದೆಯೂ ತ್ಯಾಜ್ಯಗಳನ್ನು ತಂದು ಇಲ್ಲಿ ಎಸೆಯಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here