ಪುತ್ತೂರು: ಅನಿಲ್ ಕುಮಾರ್ ಶೆಟ್ಟಿ ಮತ್ತು ನೈಲಾಡಿ ಪ್ರಕಾಶ್ ಶೆಟ್ಟಿ ಸಂಯೋಜನೆಯಲ್ಲಿ ವಸಂತ ಗಿಳಿಯಾರವರ ಸಹಕಾರದಲ್ಲಿ ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ಯಕ್ಷ ವೈಭವ ಜರಗಿತು. ವಿಶೇಷ ಆಹ್ವಾನಿತರಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭಾಗವಹಿಸಿದ್ದರು. ಈ ಸಂದರ್ಭ ಆಯೋಜಕರು ಅರುಣ್ ಪುತ್ತಿಲರಿಗೆ ಬೆಳ್ಳಿಯ ಗಧೆ ನೀಡಿ ಸನ್ಮಾನಿಸಿದರು. ಬೆಂಗಳೂರಿನ ಅಭಿಮಾನಿಗಳು “ದಕ್ಷಿಣದ ನೇತಾರ” ಎಂಬ ನಾಮಾಂಕಿತ ಭಾವಚಿತ್ರ ನೀಡಿ ಸನ್ಮಾನಿಸಿದರು.
ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಗಂಡುಕಲೆ ಯಕ್ಷಗಾನವನ್ನು ರಾಜಧಾನಿಯಲ್ಲಿ ಸದಾ ಕೆಲಸದ ಒತ್ತಡದಲ್ಲಿರುವ ಜನತೆಗೆ ಪ್ರದರ್ಶಿಸುವ ಮೂಲಕ ಪೆರ್ಡೂರು ಮೇಳ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ನಾಯಕ ಅಶ್ವಿತ್ ಶೆಟ್ಟಿ ಕೊಡ್ಲಾಡಿ ಮತ್ತು ನಟ ಪೆರ್ಡೂರಿನ ಸತೀಶ್ ಆಚಾರ್ಯರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಅನೇಕ ಯಕ್ಷಾಭಿಮಾನಿಗಳು, ಪುತ್ತಿಲ ಅಭಿಮಾನಿಗಳು ಉಪಸ್ಥಿತರಿದ್ದರು.