ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೋಟ್ ಪುಸ್ತಕ ಮತ್ತು ಕೊಡೆ ವಿತರಣೆ

0

ಉಪ್ಪಿನಂಗಡಿ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ಸಹಕಾರದಿಂದ ಅರ್ಹ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಛತ್ರಿ ವಿತರಿಸಲಾಯಿತು.

ದಾನಿಗಳಾದ ಮೈಸೂರು ಎಸ್‌ಎಲ್‌ವಿ ಬುಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಗ್ರೂಪಿನ ಮಾಲೀಕ ದಿವಾಕರ ದಾಸ್ ಮೈಸೂರು ಶಾಲೆಯ 45 ಅರ್ಹ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ನೀಡಿ ಸಹಕರಿಸಿದರು. ಕೆಮ್ಮಾರ ಶಾಲೆಯ ಹಳೇ ವಿದ್ಯಾರ್ಥಿ ಹರಿನಾರಾಯಣ ಮತ್ತು ಅವರ ಧರ್ಮ ಪತ್ನಿ ಮಾಜಿ ಪಂಚಾಯತ್ ಸದಸ್ಯೆ ಮಾಲತಿ ಹರಿನಾರಾಯಣ ರವರ ಸಹಕಾರದಿಂದ ಶಾಲೆಯ 20 ಅರ್ಹ ವಿದ್ಯಾರ್ಥಿಗಳಿಗೆ ಛತ್ರಿಯನ್ನು ವಿತರಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಎಂ ಮಾತನಾಡಿ ಸರಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಪಠ್ಯಪರಿಕರಗಳನ್ನು ನೀಡಿ ಸಹಕರಿಸಿದ ದಾನಿಗಳಿಗೆ,ದಾನಿಯನ್ನು ಪರಿಚಯಿಸಿ ಸಹಕರಿಸಿದ ವಸಂತ ಅಮೀನ್ ಪಾದೆ ಮತ್ತು ಪದ್ಮನಾಭ ಶೆಟ್ಟಿ ಇವರಿಗೂ ಕೃತಜ್ಞತೆಯನ್ನು ಸಲ್ಲಿಸಿ, ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದಾನಿಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುತ್ತಿರುವುದು ಮಾದರಿ ಕಾರ್ಯದ ಜೊತೆಗೆ ಹೆಮ್ಮೆಯ ವಿಚಾರವಾಗಿದೆ ಎಂದರು.

ವೇದಿಕೆಯಲ್ಲಿ ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ, ಸಮಿತಿ ಸದಸ್ಯರಾದ ಪದ್ಮನಾಭ ಶೆಟ್ಟಿ,ಯೋಗಿತಾ, ಸುಮಯ್ಯ, ದೈಹಿಕ ಶಿಕ್ಷಣ ಶಿಕ್ಷಕಿ ಮೋಹನಾಂಗಿ, ಸುಮನಾ, ಶಿಕ್ಷಕ ವೃಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here