ಕೌಕ್ರಾಡಿ: ಸಕ್ಷಮ್ ಕೇಂದ್ರ ಉದ್ಘಾಟನೆ

0

ನೆಲ್ಯಾಡಿ: ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಡೇ-ಎನ್‌ಆರ್‌ಎಲ್‌ಎಂ ಹಾಗೂ ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಸ್ಥೆಯ ಮೂಲಕ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್‌ಗೆ ಮಂಜೂರಾಗಿರುವ ಆರ್ಥಿಕ ಸಾಕ್ಷರತೆ ಮತ್ತು ಸೇವಾ ವಿತರಣಾ ಕೇಂದ್ರ (CFL & SD)ಸಕ್ಷಮ್ ಕಛೇರಿಯನ್ನು ನೆಲ್ಯಾಡಿ ಸುಬ್ರಹ್ಮಣ್ಯ ವಿಲಾಸ ಕಟ್ಟಡದಲ್ಲಿ ಜು.10ರಂದು ಉದ್ಘಾಟನೆಗೊಂಡಿತು.


ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷೆ ವನಿತಾ ಉದ್ಘಾಟಿಸಿದರು. ಅಮೂಲ್ಯ ಆರ್ಥಿಕ ಸಾಕ್ಷರತೆ ಸಮುದಾಯ ಸಂಪನ್ಮೂಲ ವ್ಯಕ್ತಿ ಗೀತಾ ವಿಜಯರವರು ಸಕ್ಷಮ್ ಕೇಂದ್ರದ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ.ರವರು ಕಾರ್ಯಕ್ರಮದ ಉದ್ದೇಶದ ಬಗ್ಗೆ ತಿಳಿಸಿದರು. ತಾಲೂಕು ವ್ಯವಸ್ಥಾಪಕರು( ಕೃಷಿಯೇತರ ಚಟುವಟಿಕೆ), ಒಕ್ಕೂಟದ ಪದಾಧಿಕಾರಿಗಳು,ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು, ಆರ್ಥಿಕ ಸಾಕ್ಷರತೆ ಸಮುದಾಯದ ಸಂಪನ್ಮೂಲ ವ್ಯಕ್ತಿಗಳು, ಬಿ.ಸಿ ಸಖಿಗಳು ಹಾಗೂ ಎನ್ ಆರ್‌ಎಲ್‌ಎಂ ಸಿಬ್ಬಂದಿಗಳು ಹಾಗೂ ಸ್ಥಳೀಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here