ಅಧ್ಯಕ್ಷ: ಮುರಳೀಕೃಷ್ಣ ಬಡಿಲ, ಉಪಾಧ್ಯಕ್ಷ: ಪ್ರವೀಣ್ ಡಿ.
ರಾಮಕುಂಜ: ಕಡಬ ತಾಲೂಕಿನ ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ. ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಮುರಳೀಕೃಷ್ಣ ಬಡಿಲ ಚುನಾಯಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರವೀಣ್ ದೇರೆಜಾಲು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಆಡಳಿತ ಮಂಡಳಿಯ ನಿರ್ದೇಶಕರಾಗಿ ಸಾಮಾನ್ಯ ಸ್ಥಾನದಿಂದ ಮುರಳೀಕೃಷ್ಣ ಕೆ. ಬಡಿಲ, ಪ್ರವೀಣ್ ಡಿ.ದೇರೆಜಾಲು, ಸುಬ್ರಹ್ಮಣ್ಯ ಭಟ್ ಯನ್ ಬರೆಂಬಾಡಿ, ಬಾಲಕೃಷ್ಣ ಗೌಡ ಬೇಂಗದಪಡ್ಪು, ಮೋನಪ್ಪ ಮೂಲ್ಯ ಬೊಳ್ಳರೋಡಿ, ಸುರೇಶ್ ನಾಯಕ್ ಕೊಯಿಲ, ಪ್ರಕಾಶ್ ಕೆ.ಆರ್.ಬಡ್ಡಮೆ, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನದಿಂದ ಕೆ.ವಿಶ್ವನಾಥ ಮೂಲ್ಯ ಕುಂಡಡ್ಕ, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನದಿಂದ ರವಿಪ್ರಸನ್ನ ಸಿ.ಕೆ.ಕುಂಡಡ್ಕ, ಮಹಿಳಾ ಮೀಸಲು ಸ್ಥಾನದಿಂದ ರತ್ನಾವತಿ ಎಸ್.ಗೌಡ ಬಟ್ಟೋಡಿ, ರೇಖಾಶೆಟ್ಟಿ ಬರೆಂಬಾಡಿ, ಪರಿಶಿಷ್ಠ ಪಂಗಡ ಮೀಸಲು ಸ್ಥಾನದಿಂದ ನವೀನ್ ಬಿ ಬರೆಂಬಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಠ ಜಾತಿ ಮೀಸಲು ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗದೇ ಇರುವುದರಿಂದ ಈ 1 ಸ್ಥಾನ ಖಾಲಿಯಾಗಿದೆ.
ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ:
ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜು.11ರಂದು ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಿರ್ದೇಶಕರಾದ ಮುರಳೀಕೃಷ್ಣ ಬಡಿಲ, ಕೆ.ವಿಶ್ವನಾಥ ಮೂಲ್ಯ ಹಾಗೂ ಬಾಲಕೃಷ್ಣ ಗೌಡ ಬೇಂಗದಪಡ್ಪು ನಾಮಪತ್ರ ಸಲ್ಲಿಸಿದ್ದರು. ಬಳಿಕ ಬಾಲಕೃಷ್ಣ ಗೌಡರವರು ನಾಮಪತ್ರ ಹಿಂತೆಗೆದುಕೊಂಡಿದ್ದು ಮುರಳೀಕೃಷ್ಣ ಬಡಿಲ ಹಾಗೂ ಕೆ.ವಿಶ್ವನಾಥ ಮೂಲ್ಯ ಕಣದಲ್ಲಿ ಉಳಿದಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮುರಳೀಕೃಷ್ಣ ಬಡಿಲ ಅವರು ಚುನಾಯಿತರಾದರು. ಉಪಾಧ್ಯಕ್ಷರಾಗಿ ಪ್ರವೀಣ್ ಡಿ.ದೇರೆಜಾಲು ಅವಿರೋಧವಾಗಿ ಆಯ್ಕೆಗೊಂಡರು.
ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ.ಅವರು ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯದರ್ಶಿ ಚಿತ್ತರಂಜನ್ ರಾವ್, ಸಿಬ್ಬಂದಿಗಳಾದ ಹರಿಪ್ರಸಾದ್ ರಾವ್, ಜಲಜಾಕ್ಷಿ ಹಾಗೂ ಧರ್ಣಪ್ಪ ಗೌಡ ಸಹಕರಿಸಿದರು.