





ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕ 2022-23ನೇ ಸಾಲಿನಲ್ಲಿ ನಡೆಸಿದ ಸೇವಾ ಕಾರ್ಯಗಳನ್ನು ಗುರುತಿಸಿ ಕರ್ನಾಟಕ ರಾಜ್ಯದಲ್ಲಿ 23ನೇ ಸ್ಥಾನ ಮತ್ತು ಪುತ್ತೂರು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಜು.7ರಂದು ನಡೆದ ನವಜೀವನ ಸದಸ್ಯರ ಸಮಾವೇಶ ಮತ್ತು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ಮತ್ತು ಹಣ್ಣಿನ ಗಿಡ ನೀಡಿ ಗಣ್ಯರು ಅಭಿನಂದಿಸಿದರು.



ವಲದಯ ಮಾಜಿ ಮೇಲ್ವಿಚಾರಕ ಹರೀಶ್ ಕುಲಾಲ್, ಹಾಲಿ ಮೇಲ್ವಿಚಾರಕ ಪ್ರಶಾಂತ್ ಕುಮಾರ್, ಬಲ್ನಾಡು ಘಟಕದ ಸಂಯೋಜಕಿ ಆಶಾಲತಾ, ಪ್ರತಿನಿಧಿ ವಿನಯ ನಾಯ್ಕ, ಸ್ವಯಂ ಸೇವಕರಾಗಿ ಜಗದೀಶ್, ಲೋಕೇಶ, ವಿನೋದ್, ನವೀನ್, ಹರಿಪ್ರಸಾದ್, ಚಂದ್ರಶೇಖರ, ಸುನೀಲ್, ರೋಷನ್, ಅಜೇಯ್, ಕಾರ್ತಿಕ್, ಬಾಲಕೃಷ್ಣ, ಶಂಬು ಪೂಜಾರಿ, ಸ್ವಾತಿ, ಅರುಣಾ ಪ್ರಶಸ್ತಿ ಸ್ವೀಕರಿಸಿದರು.
ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಉತ್ತಮ ಕೆಲಸ ಕಾರ್ಯ ಮಾಡಿ ಜನಮನ್ನಣೆ ಗಳಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.












