ಪುತ್ತೂರು: ಕೇಂದ್ರ ಸರಕಾರದ ಸೂಚನೆಯಂತೆ ಹಿಂದಿನ ರಾಜ್ಯ ಬಿಜೆಪಿ ಸರಕಾರವು ಏಕರೂಪದ ಬೈಲಾ ತಯಾರಿಸಿ ಬೈಲಾವನ್ನು ಸಹಕಾರಿ ಸಂಘಗಳ ಮಹಾಸಭೆಯಲ್ಲಿ ಅಂಗೀಕರಿಸಬೇಕೆಂದು ಅದೇಶ ಹೊರಡಿಸಿದೆ. ಈ ಆದೇಶದ ಮೂಲಕ ಸಹಕಾರಿ ಸಂಘಗಳನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರುವ ಹುನ್ನಾರವನ್ನು ಬಿಜೆಪಿ ಸರಕಾರ ನಡಸಿರುತ್ತದೆ. ಇದರಿಂದ ಸಹಕಾರಿ ಸಂಘಗಳು ಸಂಕಷ್ಟಕ್ಕೆ ಒಳಗಾಗುತ್ತದೆ, ಆದುದರಿಂದ ನಮ್ಮ ಸರಕಾರವು ಬಿಜೆಪಿ ಸರಕಾರದ ಈ ಆದೇಶವನ್ನು ಜಾರಿ ಆಗದಂತೆ ತಡೆಯಬೇಕು ಎಂದು ಶಾಸಕರಾದ ಅಶೋಕ್ ಕುಮಾರ್ ರೈ ಯವರು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರಲ್ಲಿ ಮನವಿ ಮಾಡಿದರು.
ಇದೀಗ ಸರಕಾರ ಸಹಕಾರಿ ಸಂಘದಿಂದ ಸಾಲ ಪಡೆಯುವ ರೈತರಿಗೆ ಫಾರ್ಮರ್ ಐ ಡಿ ಮಾಡಿಸಬೇಕೆಂದು ಆದೇಶ ಮಾಡಿದೆ. ಇದು ಒಳ್ಳೆಯ ವಿಚಾರ ಆದರೆ ಎಫ್ -ಐಡಿ ಮಾಡಿಸುವ ಸಂದರ್ಭಲ್ಲಿ ಜಿ ಪಿ ಎ ಹೋಲ್ಡರ್ ಗಳಿಗೆ ಆಗುವ ಸಮಸ್ಯೆಯನ್ನು ಬಗೆಹರಿಸಬೇಕು ಮತ್ತು ಎಫ್- ಐಡಿ ಮಾಡಿಸಲು ಸಹಕಾರಿ ಸಂಘಗಳಿಗೆ ಇನ್ನಷ್ಟು ಸಮಯವಕಾಶ ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು, ಕೃಷಿಕರಿಗೆ ನೀಡುತ್ತಿದ್ದ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಮಿತಿಯನ್ನು ರೂ.3 ಲಕ್ಷ ದಿಂದ 5 ಲಕ್ಷಕ್ಕೆ ಹಾಗೂ ಕೃಷಿ ಅಭಿವೃದ್ಧಿ ಸಾಲವನ್ನು ರೂ.10 ಲಕ್ಷದಿಂದ 15 ಲಕ್ಷಕ್ಕೆ ಏರಿಸಿರುವುದಕ್ಕೆ ಈ ಸಂದರ್ಭದಲ್ಲಿ ಸಹಕಾರ ಸಚಿವರನ್ನುಶಾಸಕರು ಅಭಿನಂದಿಸಿದರು
ಈ ಸಂದರ್ಭದಲ್ಲಿ ಅರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, ಮಾಜಿ ಜಿಪ ಸದಸ್ಯ ಎಂ ಎಸ್ ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ, ರೋಷನ್ ರೈ ಬನ್ನೂರು,ಪುತ್ತೂರು ರೈತ ಸಂಘದ ಅಧ್ಯಕ್ಷ ಶ್ರೀಧರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು ಸಹಕಾರಿ ಸಂಸ್ಥೆಗಳ ತೊಂದರೆಗಳನ್ನು ನಿವಾರಣೆ ಮಾಡಿ ಸಹಕಾರಿ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ