ಜು.15: ರೋಟರಿ ಎಲೈಟ್, ಸಂಸಾರ ಜೋಡುಮಾರ್ಗದವರಿಂದ ಸುದಾನದಲ್ಲಿ ರಂಗಶಾಲೆ ಆರಂಭ

0

ಪುತ್ತೂರು: ರೋಟರಿ ಪುತ್ತೂರು ಎಲೈಟ್ ಇದರ ನೇತೃತ್ವದಲ್ಲಿ ಸಂಸಾರ ಜೋಡುಮಾರ್ಗ ಸಹಯೋಗದಲ್ಲಿ ಶನಿವಾರದ ರಂಗಶಾಲೆಯು ಸುದಾನ ಎಡ್ವರ್ಡ್ ಹಾಲ್ ನಲ್ಲಿ ಆರಂಭಗೊಳ್ಳಲಿದೆ. 9 ರಿಂದ 14 ವರ್ಷದೊಳಗಿನ ಮಕ್ಕಳು ಈ ರಂಗಶಾಲೆಗೆ ಸೇರ್ಪಡೆಗೊಳ್ಳಲು ಅವಕಾಶವಿದ್ದು ಪರಿಣತ ರಂಗನಿರ್ದೇಶಕರಿಂದ ರಂಗಭ್ಯಾಸದ ಜೊತೆಗೆ ರಂಗಪರಿಕರ, ರಂಗಸಾಹಿತ್ಯ ಹಾಗೂ ರಂಗಸಂಗೀತ ಕುರಿತಾದ ರಂಗಪಾಠ ನಡೆಯಲಿದೆ. ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಆಸಕ್ತ ವಿದ್ಯಾರ್ಥಿಗಳು 7899161098 ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸುವಂತೆ ರೋಟರಿ ಪುತ್ತೂರು ಎಲೈಟ್ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here