ಪುತ್ತೂರು: ಅನೇಕ ವರ್ಷಗಳಿಂದ ಪುತ್ತೂರಿನ ಆಸುಪಾಸಿನಲ್ಲಿ ಸುತ್ತಾಡುತ್ತಿದ್ದು ಅನಾರೋಗ್ಯ ಪೀಡಿತರಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಸುಮಾರು 65 ವರ್ಷ ಪ್ರಾಯದ ರಾಧಾಕೃಷ್ಣ ಎಂಬವರನ್ನು ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಅವರ ವಿನಂತಿಯ ಮೇರೆಗೆ ರೋಟರಿ ಕ್ಲಬ್ ಇದರ ಹ್ಯಾಪಿ ಸ್ಕೂಲ್ಸ್ ವೈಸ್ ಚೇರ್ಮನ್ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ, ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ರೀಲತಾ ಅವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ರೋಟರಿ ಯುವ ಸಮಾಜ ಸೇವಾ ವಿಭಾಗದ ನಿರ್ದೇಶಕರಾದ ಅಭೀಶ್.ಕೆ ಅವರ ಉಪಸ್ಥಿತಿಯಲ್ಲಿ ನಿರ್ಗತಿಕರ ಪುನರ್ ವಸತಿ ಕೇಂದ್ರಕ್ಕೆ ಸೇರಿಸಲಾಯಿತು. ಈ ಮೂಲಕ ಪುತ್ತೂರು ಉಮೇಶ್ ನಾಯಕ್ ಅವರು ಶಿಶು ಅಭಿವದ್ಧಿ ಇಲಾಖೆಯ ಯೋಜನಾಧಿಕಾರಿ ಶ್ರೀಲತಾ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಯೋಜನಾಧಿಕಾರಿಗಳಾದ ಗಾಯತ್ರಿ ಹಾಗೂ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಸಹಕಾರದೊಂದಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು ಹದಿನೈದು ನಿರ್ಗತಿಕರನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಮಾನವೀಯತೆ ಮೆರೆದಿರುತ್ತಾರೆ. ಎರಡು ವರ್ಷಗಳ ಹಿಂದೆ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಮೂರು ಮಕ್ಕಳೊಂದಿಗೆ, ಕುಡಿದ ಅಮಲಿನಲ್ಲಿ ಅಲೆದಾಡುತ್ತಾ ಪೇಟೆಯಲ್ಲಿ ರಂಪಾಟ ಮಾಡುತ್ತಾ ತಿರುಗುತ್ತಿದ್ದ ಓರ್ವ ಎಚ್.ಐ.ವಿ ಪೀಡಿತ ಮಹಿಳೆ ಹಾಗೂ ಆಕೆಯ ಮೂರು ಮಕ್ಕಳಲ್ಲಿ ಎರಡು ಹೆಚ್.ಐ.ವಿ ಪೀಡಿತ ಮಕ್ಕಳನ್ನು ಎಚ್‌ಐವಿ ರೋಗಿಗಳ ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಮಕ್ಕಳಿಗೆ ವಿದ್ಯಾಭ್ಯಾಸದ ವ್ಯವಸ್ಥೆ ಮಾಡಿದ್ದರು. ಉಮೇಶ್ ನಾಯಕ್‌ರವರು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯPರಾಗಿಯೂ ಸೇವೆ ಮಾಡುತ್ತಿದ್ದಾರೆ.
Home ಇತ್ತೀಚಿನ ಸುದ್ದಿಗಳು ರೋಟರಿ ಕ್ಲಬ್ ಪುತ್ತೂರು ಯುವ, ಶಿಶು ಅಭಿವದ್ಧಿ ಇಲಾಖೆಯಿಂದ ನಿರ್ಗತಿಕ ವ್ಯಕ್ತಿಗೆ ಪುನರ್ವಸತಿ