ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ

0

ಪುತ್ತೂರು: ಎ.ಪಿ.ಎಂ.ಸಿ. ರಸ್ತೆಯ ಆದರ್ಶ ಆಸ್ಪತ್ರೆ ಬಳಿಯ ಜೆ.ಎಂ.ಜೆ. ಕಾಂಪ್ಲೆಕ್ಸ್‌ನಲ್ಲಿ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಉದ್ಘಾಟನೆಯು ಜು.14 ರಂದು ನೆರವೇರಿತು.


ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಮಹೇಶ್‌ಚಂದ್ರ ಕೆಎಎಸ್‌ ನೂತನ ಸೊಸೈಟಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಸೊಸೈಟಿಯ ನೋಂದಣಿ ಪ್ರಮಾಣಪತ್ರವನ್ನು ಅನಾವರಣಗೊಳಿಸಿ ಮಾತನಾಡಿ, ಸಂಸ್ಥೆಯು ದೇವರ ಜಾಗದಲ್ಲಿ ಮೂರು ಧರ್ಮಗಳ ದೇವರುಗಳ ಪೊಟೊ ಇಟ್ಟು ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೊಸೈಟಿಗಳಿಗೆ ಗುರುತರ ಸವಾಲುಗಳಿವೆ. ಎಲ್ಲಾ ರೀತಿಯಿಂದಲೂ ಬಾಂಧವರು ಠೇವಣಿಯಿಟ್ಟು ಸೊಸೈಟಿಯ ಉತ್ತುಂಗಕ್ಕೆ ಕಾರಣವಾಗಬೇಕಿದೆ. ಸಾಲ ತಗೊಂಡವರು ಕ್ಲಪ್ತ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡಿದಾಗ ಸಂಸ್ಥೆಯು ಬೆಳೆಯುವುದು ಎಂದರು.


ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಮಾತನಾಡಿ, ನಾಲ್ವರು ಯುವಕರಿಂದ ಆರಂಭಗೊಳ್ಳುತ್ತಿರುವ ಈ ಸಂಸ್ಥೆಯು ಯುವಕರಲ್ಲಿನ ಯೋಚನೆ ಹಾಗೂ ಯೋಜನೆಗಳಿಂದ ಸಂಸ್ಥೆಯು ಹೆಸರು ಗಳಿಸುತ್ತಾ ಸಾಗಲಿ. ಹಣವನ್ನು ಕೇವಲ ಕೂಡಿಟ್ಟರೆ ಸಾಲದು. ಹಣವು ಪರಸ್ಪರ ಹರಿದಾಡುತ್ತಿದ್ದರೆ ಮಾತ್ರ ಭಾರತದ ಆರ್ಥಿಕತೆ ಉತ್ತಮಗೊಳ್ಳುವುದು. ಹಣ ಅಂದರೆ ರಕ್ತ. ಹೇಗೆ ರಕ್ತವು ಮನುಷ್ಯನ ದೇಹದಲ್ಲಿ ಸರಾಗವಾಗಿ ಸಂಚಾರವಾದಾಗ ಮಾತ್ರ ದೇಹ ಸ್ಥಿರತೆ ಹೊಂದುವುದೋ ಹಾಗೆಯೇ ಹಣ ನಿರಂತರ ಚಲಾವಣೆಯಾದಾಗ ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣಲು ಸಾಧ್ಯ. ಅದರಂತೆ ನೂತನ ಸೊಸೈಟಿಯು ಯಶಸ್ವಿ ಪಥದಲ್ಲಿ ಸಾಗಲಿ ಎಂದರು.


ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಕೆ. ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ, ಆಭ್ಯುದಯ ಎಂದರೆ ಉದಯಿಸುವ ಸೂರ್ಯ. ಹೇಗೆ ಸೂರ್ಯ ಪ್ರಕಾಶಮಾನವಾದ ಕಿರಣಗಳಿಂದ ಬೆಳಕನ್ನು ಕೊಡುತ್ತಾ ನಮ್ಮಲ್ಲಿ ಕಾರ್ಯ ನಿರ್ವಹಿಸಲು ಹುಮ್ಮಸ್ಸು ಕೊಡುವ ಹಾಗೆ ಸೊಸೈಟಿಯು ಎಲ್ಲರ ಅನುಗ್ರಹದಿಂದ ಎತ್ತರೇತ್ತರಕ್ಕೆ ಬೆಳೆಯಲಿ. ನೂತನ ಸೊಸೈಟಿಯು `ನಾವು ಬೆಳೆಯಬೇಕು ಹಾಗೆಯೇ ನೀವೂ ಬೆಳೆಯಬೇಕು’ ಎನ್ನುವ ಧ್ಯೇಯವಾಕ್ಯವನ್ನು ಹೊಂದಿದ್ದು ಸಹಕಾರ ತತ್ವದಡಿಯಲ್ಲಿ ಸೊಸೈಟಿಯು ಉನ್ನತ ಹಂತಕ್ಕೇರಲಿ ಎಂದರು.


ಸಂಪ್ಯ ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ ನಡುಬೈಲು ದೀಪ ಬೆಳಗಿಸಿ ಮಾತನಾಡಿ, ಪುತ್ತೂರಿನ ಪವಿತ್ರ ನೆಲದಲ್ಲಿ ಸೊಸೈಟಿ ಇಂದು ಉದ್ಘಾಟನೆಗೊಂಡಿದೆ. ನನಗೆ ಹತ್ತು ಜನ ಯುವಕರು ಕೊಡಿ, ಭಾರತವನ್ನು ಸದೃಢ ಭಾರತ ಮಾಡಬಲ್ಲೆ ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ಈ ಸೊಸೈಟಿಯಲ್ಲೂ ನಾಲ್ಕು ಮಂದಿ ಅನುಭವಿ ಯುವಕರಿದ್ದಾರೆ. ಖಂಡಿತವಾಗಿ ಸೊಸೈಟಿಯನ್ನು ಲಾಭದೆಡೆಗೆ ಕೊಂಡೊಯ್ಯಬಲ್ಲರು ಎಂಬ ವಿಶ್ವಾಸ ನನಗಿದೆ. ಗ್ರಾಹಕರಿಗೆ ಬೇಕಾಗುವ ಸೌಲಭ್ಯಗಳು ಶೀಘ್ರವಾಗಿ ಸಿಗುವಂತಾದಾಗ, ಗ್ರಾಹಕರೊಂದಿಗೆ ನಗುಮಖದ ಸೇವೆ ನೀಡಿದಾಗ ಸಂಸ್ಥೆಯು ಮುನ್ನಡೆ ಹೊಂದಲು ಸಾಧ್ಯವಾಗುತ್ತದೆ ಅಲ್ಲದೆ ಸಂಸ್ಥೆಯು ಸೂರ್ಯನ ಕಿರಣದಂತೆ ಎಲ್ಲೆಡೆ ಪಸರಿಸಲಿ ಎಂದರು.


ಜೆ.ಎಂ.ಜೆ. ಕಾಂಪ್ಲೆಕ್ಸ್ ಮಾಲಕ ಅಂಟನಿ ಒಲಿವೆರಾರವರು ಮಾತನಾಡಿ, ಇಲ್ಲಿನ ನೆಲ, ಜಲದ ಸಂಪೂರ್ಣ ಆಶೀರ್ವಾದದೊಂದಿಗೆ ದೇವಸ್ಥಾನ, ಚರ್ಚ್, ಮಸೀದಿ ಮುಂತಾದ ಪವಿತ್ರ ದೇಗುಲ ಇರುವ ಮಧ್ಯೆ ನೂತನ ಸೊಸೈಟಿಯು ಲೋಕಾರ್ಪಣೆಗೊಳ್ಳುತ್ತಿದೆ. ಗ್ರಾಹಕರಿಗೆ ಬೇಕಾದಂತಹ ಸಹಕಾರವನ್ನು ಒಳ್ಳೆಯ ಮನಸ್ಸಿನಿಂದ ನೀಡಿದಾಗ ಖಂಡಿತಾ ಯಶಸ್ಸು ಲಭಿಸುತ್ತದೆ ಎಂದರು.


ಸಾಲ್ಮರ ದಾರುಲ್ ಹಸನಿಯಾ ಮರಿಯಂ ಹಿಫ್ಲುಲ್ ಕುರ್‌ಆನ್ ಕಾಲೇಜ್‌ನ ಪ್ರಧಾನ ಕಾರ್ಯದರ್ಶಿ ಹಾಜಿ ಕೆ. ಹಸನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಿಂಪಲ್ ಹಾಗೂ ಸುಶ್ಮಿತಾ ಪ್ರಾರ್ಥಿಸಿದರು. ಪ್ರವರ್ತಕ ವಿಕ್ಟರ್ ಶರೂನ್ ಡಿ’ಸೋಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮತ್ತೋರ್ವ ಪ್ರವರ್ತಕ ಪವನ್ ಕುಮಾರ್ ಶೆಟ್ಟಿ ವಂದಿಸಿದರು. ಡಿಂಪಲ್ ಕಾರ್‍ಯಕ್ರಮ ನಿರೂಪಿಸಿದರು.

ನಿರಖು ಠೇವಣಿ ಯೋಜನೆಗಳು:
-10% 365 ದಿನಗಳಿಗೆ ಶುಭಾರಂಭದ ಪ್ರಯುಕ್ತ ಸೀಮಿತ ಅವಧಿಗೆ ಮಾತ್ರ
-10.5% ಹಿರಿಯ ನಾಗರಿಕರಿಗೆ (ತ್ರೈಮಾಸಿಕ ಬಡ್ಡಿದರದಲ್ಲಿ, 365 ದಿನಗಳಿಗೆ ಮಾತ್ರ ಅನ್ವಯ)
-10.25% 777 ದಿನಗಳಿಗೆ
-9% 366 ದಿನಗಳಿಂದ ಮೇಲ್ಪಟ್ಟು

-ವಿಧವೆಯರಿಗೆ, ಅತೀತಚೇತನರಿಗೆ, ಸೈನಿಕರಿಗೆ, ನಿವೃತ್ತ ಸೈನಿಕರಿಗೆ, ನಿವೃತ್ತ ಪೊಲೀಸರಿಗೆ(ಸೂಕ್ತ ದಾಖಲಾತಿ ಒದಗಿಸುವುದು) ವಿಶೇಷ ಮೀಸಲಾತಿ ಬಡ್ಡಿದರ
-ಮಾಸಿಕ ವರಮಾನ ಯೋಜನೆಯಲ್ಲಿ 36 ತಿಂಗಳಿಗೆ ರೂ.1 ಲಕ್ಷಕ್ಕೆ ಪ್ರತೀ ತಿಂಗಳು ರೂ.700/- ಬಡ್ಡಿ ಪಡೆಯಿರಿ
-ಅಭ್ಯುದಯ ಸಮೃದ್ಧಿ ಯೋಜನೆಯಲ್ಲಿ 96 ತಿಂಗಳುಗಳಲ್ಲಿ ನಿಮ್ಮ ಹಣ ದ್ವಿಗುಣ

ಅಲ್ಪಾವಧಿ ಠೇವಣಿ ಯೋಜನೆಗಳು:
-30 ದಿನಗಳಿಂದ 90 ದಿನಗಳವರೆಗೆ 6%
-91 ದಿನಗಳಿಂದ 180 ದಿನಗಳವರೆಗೆ 6.5%
-181 ದಿನಗಳಿಂದ 272 ದಿನಗಳವರೆಗೆ 7%
-273 ದಿನಗಳಿಂದ 364 ದಿನಗಳವರೆಗೆ 8%

ಅಭ್ಯುದಯ ಆವರ್ತನಿಧಿ ಯೋಜನೆಗಳು:
-ಮಾಸಿಕ ಕಂತು ರೂ.500/- ಪಾವತಿಸಿ, 12 ತಿಂಗಳುಗಳಿಗೆ ರೂ.6,264/- ಪಡೆಯಿರಿ
-ಮಾಸಿಕ ಕಂತು ರೂ.2000/- ಪಾವತಿಸಿ, 48 ತಿಂಗಳುಗಳಿಗೆ ರೂ.1,13,323/- + ರೂ.1000/- ಅಧಿಕ ಬೋನಸ್ ಪಡೆಯಿರಿ
-ಮಾಸಿಕ ಕಂತು ರೂ.700/- ಪಾವತಿಸಿ, 36 ತಿಂಗಳುಗಳಿಗೆ 9% ಬಡ್ಡಿದರದಂತೆ ರೂ.28,992/- ಪಡೆಯಿರಿ
-ಮಾಸಿಕ ಕಂತು ರೂ.1200/- ಪಾವತಿಸಿ, 60 ತಿಂಗಳುಗಳಿಗೆ 8.5% ಬಡ್ಡಿದರದಂತೆ ರೂ.89,819/- ಪಡೆಯಿರಿ
-ಮಾಸಿಕ ಕಂತು ರೂ.1100/- ಪಾವತಿಸಿ, 120 ತಿಂಗಳುಗಳಿಗೆ ರೂ.2,01,978/- ಪಡೆಯಿರಿ

ನಿತ್ಯನಿಧಿ ಖಾತೆ:
3%-1ರಿಂದ 2 ವರ್ಷ
4%-2 ವರ್ಷ ಮೇಲ್ಪಟ್ಟು
ಉಳಿತಾಯ ಖಾತೆ 4%

ಸೇವಾ ವೈಶಿಷ್ಟ್ಯಗಳು:
ಆರ್.ಟಿ.ಜಿ.ಎಸ್./ಎನ್.ಇ.ಎಫ್.ಟಿ.(ಬ್ಯಾಂಕ್ ಸಹಯೋಗದೊಂದಿಗೆ)ಪಾನ್ ಕಾರ್ಡ್ *ಆರ್.ಟಿ.ಸಿ.(ಪಹಣಿಪತ್ರ)

-ಪ್ರತೀ ಗ್ರಾಂ ಚಿನ್ನಾಭರಣಕ್ಕೆ ರೂ.4800/-ರಂತೆ 0.99% ಮಾಸಿಕ ಬಡ್ಡಿ ದರದಲ್ಲಿ ತ್ವರಿತಗತಿಯಲ್ಲಿ ಚಿನ್ನಾಭರಣ ಸಾಲ
-ಬ್ಯಾಂಕ್, ಫೈನಾನ್ಸ್ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟ ಚಿನ್ನಾಭರಣಗಳನ್ನು ಬಿಡಿಸಿ ನಮ್ಮಲ್ಲಿ ಅಧಿಕ ಮೊತ್ತದ ಸಾಲ ಪಡೆಯಿರಿ.

ಸರಳ ಬಡ್ಡಿದರದಲ್ಲಿ ತ್ವರಿತ ಸೇವೆಯೊಂದಿಗೆ:ಸಹಕಾರಿಯ ಶ್ರೇಯಸ್ಸಿಗೆ ಸಹಕರಿಸಿ…
ಪುತ್ತೂರಿನ ಹೃದಯಭಾಗದಲ್ಲಿ ಕಾರ್ಯಾಚರಿಸಲಿರುವ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಎನ್ನುವ ಸಹಕಾರಿಯು ದ.ಕ ಜಿಲ್ಲೆಯ ಜನರ ಆರ್ಥಿಕ ಸದೃಢತೆಗೋಸ್ಕರ ಸಹಕಾರಿಯ ತತ್ವದಡಿ ಮತ್ತು ಸಂಯುಕ್ತ ಸಹಕಾರಿಯ ಮಾರ್ಗಸೂಚಿಗಳೊಂದಿಗೆ ಸದಸ್ಯರ ಮತ್ತು ಪ್ರಾಸಂಗಿಕವಾಗಿ ಸಾರ್ವಜನಿಕರ ಆರ್ಥಿ ಕಲ್ಯಾಣವನ್ನು ಪ್ರವರ್ತಿಸಲು ಕಾರ್ಯರೂಪಗೊಳ್ಳುತ್ತಿದೆ. ಸಹಕಾರಿಯ ಸದಸ್ಯರಲ್ಲಿ ಮಿತವ್ಯಯ, ಸ್ವ-ಸಹಾಯ, ಸಹಕಾರ ಭಾವನೆಯನ್ನು ಮೂಡಿಸಿ, ಸದಸ್ಯರ ವಿವಿಧ ರೀತಿಯ ಹೂಡಿಕೆಯ ಅಗತ್ಯತೆಗಳನ್ನು ಪೂರೈಸುವ ಉದ್ಧೇಶವಾಗಿರುತ್ತದೆ. ಸಹಕಾರಿಯು ಅಂತರ್ಜಾಲವನ್ನೊಳಗೊಂಡಂತೆ ಇತರ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಸದಸ್ಯರಿಗೆ ವಿವಿಧ ರೀತಿಯ ಹಣಕಾಸು ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಿ ಸದಸ್ಯರನ್ನು ಸದೃಢರನ್ನಾಗಿಸುವ ಗುರಿಯನ್ನು ಹೊಂದಿದ್ದು ಸಹಕಾರಿಯ ಶ್ರೇಯಸ್ಸಿಗೆ ಸಹಕರಿಸಬೇಕಾಗಿ ಅಪೇಕ್ಷಿಸುತ್ತೇವೆ.
-ವಿಕ್ಟರ್ ಶರೂನ್ ಡಿ’ಸೋಜ, ಪ್ರೇಮ್ ರೋಶಲ್ ಡಿ’ಸೋಜ, ವಾಲ್ಟರ್ ಅರುಣ್ ಡಿ’ಸೋಜ, ಪವನ್ ಕುಮಾರ್ ಶೆಟ್ಟಿ, ಪ್ರವರ್ತಕರು
ಆಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ

ಸಭಾ ಕಾರ್ಯಕ್ರಮದ ಬಳಿಕ ಸೊಸೈಟಿಗೆ ಭೇಟಿಯಿತ್ತ ಶ್ರೀಧಾಮ ಮಾಣಿಲದ ಸ್ವಾಮೀಜಿಗಳಾದ ಮೋಹನದಾಸ ಪರಮಹಂಸ ಸ್ವಾಮೀಜಿರವರು ನೂತನ ಸಂಸ್ಥೆಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here