ಪುತ್ತೂರು: ಗುಣಮಟ್ಟ, ವಿಶ್ವಾಸಾರ್ಹತೆ, ಕಡಿಮೆ ಖರ್ಚಿನಲ್ಲಿ ಸುಂದರ ಕಟ್ಟಡ ನಿರ್ಮಾಣಕ್ಕೆ ಹೆಸರು ವಾಸಿಯಾಗಿದ್ದು, ಮನೆ ನಿರ್ಮಾಣದ ಕನಸು ಕಾಣುವ ಸಾವಿರಾರು ಜನರ ಗುರಿ ಈಡೇರಿಸಿರುವ, ಕಳೆದ 10 ವರ್ಷಗಳಿಂದ ವ್ಯವಹಾರ ನಿರತವಾಗಿರುವ ಪುತ್ತೂರಿನ ವಿಘ್ನೇಶ್ ಮಡ್ ಬ್ಲಾಕ್ಸ್ ಪುತ್ತೂರು ಸಂಸ್ಥೆ ಇವತ್ತು ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ. ವಿಘ್ನೇಶ್ ಮಡ್ ಬ್ಲಾಕ್ ಜೊತೆಗೆ ಚಿಕ್ಕಮುಡ್ನೂರು ಗ್ರಾಮದ ಕೊಪ್ಪಳದಲ್ಲಿ ಇಂಟರ್‌ಲಾಕ್ ಹೋಲೋಬ್ಲಾಕ್ ಉತ್ಪನ್ನಗಳ ತಯಾರಿಕಾ ಘಟಕ ಜು.16ರಂದು ಶುಭಾರಂಭಗೊಳ್ಳಲಿದೆ. ಮಾಜಿ ಶಾಸಕಿ ಶಕುಂತಳಾ .ಟಿ ಶೆಟ್ಟಿಯವರು ದೀಪ ಬೆಳಗಿಸಲಿದ್ದು, ಶಾಸಕ ಅಶೋಕ್ ಕುಮಾರ್ ರೈಯವರು ಘಟಕದ ಉದ್ಘಾಟನೆ ನೆರವೇರಿಸಲಿದ್ದಾರೆ.
ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಸಂಪ್ಯ ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು, ಮಹಾವೀರ ಮೆಡಿಕಲ್ ಸೆಂಟರ್‌ನ ವೈದ್ಯ ಡಾ. ಅಶೋಕ ಪಡಿವಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅತ್ಯುತ್ತಮ ಗುಣಮಟ್ಟದ ಉತ್ಪನ್ನ ತಯಾರಿಸಲು ಹೊಸ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಬಳಕೆ ಮಾಡಲಾಗುತ್ತಿದೆ. ದೀರ್ಘ ಬಾಳಿಕೆಯ ಇಂಟರ್‌ಲಾಕ್‌ಗಳಿಗಾಗಿ ವಿಘ್ನೇಶ್ ಇಂಟರ್‌ಲಾಕ್ ಸಂಸ್ಥೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕ ಚಿದಾನಂದ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.