





ಪುತ್ತೂರು ಪುತ್ತೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಚುನಾಯಿತರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ಪಡ್ನೂರು ಗ್ರಾಮಸ್ಥರ ಪರವಾಗಿ ಅಭಿನಂದನಾ ಕಾರ್ಯಕ್ರಮವು ಜು. 16ರಂದು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಈಶ್ವರ ಭಟ್ ಪಂಜಿಗುಡ್ಡೆರವರ ಮನೆಯಲ್ಲಿ ಜರಗಲಿದೆ.


ಬೆಳಿಗ್ಗೆ ಗಂಟೆ 10:30 ರಿಂದ ಮಧ್ಯಾಹ್ನದ ತನಕ ಜರಗುವ ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಹಾಗೂ ಜಿಲ್ಲಾ ಮಟ್ಟದ ಹಲವಾರು ಕಾಂಗ್ರೆಸ್ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಅಶ್ವತ ಕಟ್ಟೆ ದೇವತಾ ಸಮಿತಿಯ ಅಧ್ಯಕ್ಷ ಗಿರಿಯಪ್ಪ ಪೂಜಾರಿ, ಧೂಮಾವತಿ ಯುವಕ ಮಂಡಲದ ಅಧ್ಯಕ್ಷ ರೋಹನ್ ರಾಜ್ ಸ್ವಸ್ತಿಕ್ ಆರ್ಟ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಲೋಕೇಶ್ ಗೌಡ ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.













