ಎಂ.ಎಸ್.ಸೋಫ್ಟೆಕ್ ಗೆ ‘ಬೆಸ್ಟ್ ಜೆಸಿ ಪಾರ್ಟ್ನರ್ ಕರ್ನಾಟಕ’ ಪ್ರಶಸ್ತಿ

0

ವಿಟ್ಲ: ಭಾರತದ ಪ್ರತಿಷ್ಠಿತ ರಿಲಯನ್ಸ್ ರಿಟೇಲ್ ಲಿಮಿಟೆಡ್ ನೀಡುವಂತಹ ‘ಬೆಸ್ಟ್ ಜೆಸಿ ಪಾರ್ಟ್ನರ್ ಕರ್ನಾಟಕ’ ಪ್ರಶಸ್ತಿ ಈ ಬಾರಿ ಎಂ.ಎಸ್.ಸೋಫ್ಟೆಕ್ ಸಂಸ್ಥೆಗೆ ಒಲಿದಿದೆ.

ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಸಿಇಒ   ಎಂ.ಎಸ್. ಶಫೀಕ್ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಜಿಯೋ ಸೆಂಟರ್ ಮ್ಯಾನೇಜರ್ ಹರೀಶ್ ರವರು ಪ್ರಶಸ್ತಿ ಪ್ರಧಾನ ಮಾಡಿದರು ,ಸಿಟಿ ಸೇಲ್ಸ್ ಲೀಡ್ ಕೌಶಿಕ್ ರವರು ಉಪಸ್ಥಿತರಿದ್ದರು.

ಪುತ್ತೂರಿನ ದರ್ಬೆಯಲ್ಲಿರುವ ಬುಶ್ರ ಕಾಂಪ್ಲೆಕ್ಸ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಎಂ.ಎಸ್.ಸೋಫ್ಟೆಕ್ ಸಂಸ್ಥೆಯು ಕಳೆದ ಒಂದು ವರ್ಷದಿಂದ ಮಂಗಳೂರಿನಲ್ಲಿಯೂ ಶಾಖೆಯನ್ನು ಹೊಂದಿದ್ದು ರಿಲಯನ್ಸ್ ಜಿಯೋದ ಅಧಿಕೃತ ವಿತರಕರಾಗಿ ಸೇವೆ ಸಲ್ಲಿಸುತ್ತಿದ. ಎಂ.ಎಸ್.ಸೋಫ್ಟೆಕ್  ಸಂಸ್ಥೆಯು ಸಾಫ್ಟ್ವೇರ್ ಡೆವಲಪ್ಮೆಂಟ್ ಜೊತೆಗೆ ಜಿಯೋ ಡಿಸ್ಟ್ರಿಬ್ಯೂಟರ್ ಆಗಿ ಕಾರ್ಯನಿರ್ವಹಿಸುತ್ತಿದೆ. ಎಂ.ಎಸ್. ಶಫೀಕ್ ರವರು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು, ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಎಂ.ಎಸ್. ಮಹಮ್ಮದ್ ರವರ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here