ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಜು.15ರಂದು ನಡೆಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊ ತರಗತಿವಾರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಹೂವಿನ ಗಿಡಗಳನ್ನು ವಿತರಿಸಿ, ಗಿಡ ನೆಡುವುದರ ಮೂಲಕ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಮರಗಳೇ ಪರಿಸರದ ಜೀವಾಳ, ಪರಿಸರವೇ ಮನುಷ್ಯನ ಉಸಿರು. ಪ್ರಕೃತಿ ಮಾನವನಿಗೆ ಎಲ್ಲವನ್ನು ಕೊಟ್ಟಿತು. ಆದರೆ ಮಾನವ ಅದನ್ನು ಅತಿಯಾಗಿ ಬಳಸಲು ಪ್ರಾರಂಭಿಸಿದ. ಈ ಅತಿ ಬಳಕೆಯೇ ಪರಿಸರ ನಾಶಕ್ಕೆ ಕಾರಣವಾಯಿತು. ಇಂದು ಪರಿಸರದಲ್ಲಿ ಆಗುವ ಅನಾಹುತಗಳಿಗೆ, ಅಂತರ್ಜಲದ ಕೊರತೆಗೆ, ಭೂಕುಸಿತಕ್ಕೆ ಮನುಷ್ಯನೇ ಕಾರಣ. ಆದ್ದರಿಂದ ಪ್ರತಿ ವಿದ್ಯಾರ್ಥಿನಿಯು ತಮ್ಮ ಮನೆಗಳಲ್ಲಿ ಗಿಡಗಳನ್ನು ನೆಟ್ಟು, ಪೋಷಿಸಿ, ಪರಿಸರದ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂಬ ಸಂದೇಶ ನೀಡಿದರು.ಎಲ್ಲಾ ವಿದ್ಯಾರ್ಥಿ ಪ್ರತಿನಿಧಿಗಳು ಗಿಡಗಳನ್ನು ನೆಟ್ಟು ಅವುಗಳ ಆರೈಕೆ ಮಾಡುವ ಜವಬ್ದಾರಿ ತೆಗೆದುಕೊಂಡರು.ಶಾಲಾ ನಾಯಕಿ ಫಾತಿಮ ಕಾಸಿಂ ಬೈತಡ್ಕ ಹಾಗೂ ಉಪನಾಯಕಿ ಆಶಿಕಾ ಉಪಸ್ಥಿತರಿದ್ದರು.
ಅನನ್ಯ ಇವರು ದಿನದ ಮಹತ್ವವನ್ನು ತಿಳಿಸಿದರು. ಫಾತಿಮತ್ ಅಫ್ರಿದ ಸ್ವಾಗತಿಸಿ, ಕಾರ್‍ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಶಾಲಾ ಪರಿಸರ ಸಂಘದ ವಿದ್ಯಾಥಿನಿಯರು ಪರಿಸರದ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.